ವಿದ್ಯಾರ್ಥಿನಿಗೆ ಕಿರುಕುಳ ನೀಡಿ ಎಳೆದೊಯ್ದ ಆಟೋ ಚಾಲಕ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ವಿದ್ಯಾರ್ಥಿನಿಯೊಂದಿಗೆ ಆಟೋ ಚಾಲಕ ಅನುಚಿತವಾಗಿ ವರ್ತಿಸಿದ್ದಲ್ಲದೆ, ಕಿರುಕುಳ ನೀಡಿ ಆಟೋದಲ್ಲಿ ಯುವತಿಯನ್ನು ಹಿಡಿದು  ಎಳೆದೊಯ್ದಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ವಯಸ್ಸು ಸುಮಾರು 21 ವರ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?

ಪೊಲೀಸರ ಪ್ರಕಾರ, ಬೆಳಗ್ಗೆ 6.45ಕ್ಕೆ ವಿದ್ಯಾರ್ಥಿನಿ ಬಜಾರಪೇಟೆ ರಸ್ತೆಯಲ್ಲಿ ಕಾಲೇಜಿಗೆ ತೆರಳುವ ರಸ್ತೆ ಬದಿಯಲ್ಲಿ ಆಟೋರಿಕ್ಷಾ ಚಾಲಕ ಆಕೆ ಬಗ್ಗೆ ಅಶ್ಲೀಲ ಕಮೆಂಟ್‌ ಮಾಡಿದ್ದಾನೆ. ಈ ಬಗ್ಗೆ ಕೋಪಗೊಂಡು ವಿದ್ಯಾರ್ಥಿನಿ ಆತನ ವಿರುದ್ಧ ತಿರುಗಿಬಿದ್ದಿದ್ದಾಳೆ. ಕೂಡಲೇ ವಿದ್ಯಾರ್ಥಿನಿ ತೋಳು ಹಿಡಿದು ಎಳೆದಾಡಿ ಓಡಿಹೋಗಲು ಯತ್ನಿಸಿದ್ದಾಗಿ ಹಿರಿಯ ಇನ್ಸ್ ಪೆಕ್ಟರ್ ಜೈರಾಜ್ ರಾಣಾವರೆ ತಿಳಿಸಿದ್ದಾರೆ.

ಆಟೋದಲ್ಲಿ ಪರಾರಿಯಗುತ್ತಿದ್ದವನ ಹಿಡಿಯಲು ಪ್ರಯತ್ನಿಸುವ ವೇಳೆ ಆಟೋ ಸಮೇತ ಆಕೆ ಕೂಡ ಓಡಿದ್ದಾಳೆ. ಸುಮಾರು 500 ಮೀಟರ್ ವರೆಗೆ ಎಳೆದೊಯ್ದ ಬಳಿಕ ಕೆಳಗೆ ಬಿದ್ದಿದ್ದಾಳೆ. ಗಂಭೀರ ಗಾಯಗೊಂಡು ರಸ್ತೆಬದಿಯಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ನಮ್ಮ ಬಳಿ ಇವೆ, ಆರೋಪಿಗಳನ್ನು ಶೀಘ್ರವೇ ಹಿಡಿಯಲಾಗುವುದು ಎಂದು ಥಾಣೆ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಜೈರಾಜ್ ರಣವೇರ್ ಹೇಳಿದ್ದಾರೆ.

ವಿದ್ಯಾರ್ಥಿನಿಯ ಎಡಗೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿದರು. ಐಪಿಸಿ ಸೆಕ್ಷನ್ 354, 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!