ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಆರ್ ಎಸ್ ಅಣೆಕಟ್ಟೆಯಲ್ಲಿ ಸ್ಟಾಫ್ ಲಾಕ್ ಗೇಟ್ ಇಲ್ಲ. ಕೆಆರ್‌ಎಸ್ ಡ್ಯಾಂ ಕಟ್ಟುವಾಗ ಸ್ಟಾಫ್ ಇಲ್ಲದ ಕಾರಣ ಹಾಕಿಲ್ಲ. ಈಗ ತುಂಗಭದ್ರಾ ಅಣೆಕಟ್ಟಿನ ಪರಿಸ್ಥಿತಿಯನ್ನು ನೋಡಿದರೆ, ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಕೇಂದ್ರ ಸಚಿವ ಹಾಗೂ ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ ಗೇಟ್ 19ರ ಚೈನ್ ಲಿಂಕ್ ಮುರಿದು ಬಿದ್ದಿರುವ ಕುರಿತು ಮಂಡ್ಯದ ಪಾಂಡವಪುರದ ಸೀತಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ತುಂಗಭದ್ರಾ ಜಲಾಶಯದಲ್ಲಿ ಭಾರಿ ಅನಾಹುತ ಸಂಭವಿಸಿದೆ. 19 ಕ್ರಸ್ಟ್ ಗೇಟ್ ತೆರೆದಿವೆ. ಕೇವಲ 30 ಸಾವಿರ ಕ್ಯೂಸೆಕ್ ನೀರು ಹರಿಯುತ್ತದೆ. ಈ ಅನಾಹುತದಿಂದ ಜಲಾಶಯದಲ್ಲಿ 60 ಟಿಎಂಸಿ ನೀರು ನೀರು ಖಾಲಿಯಾಗಲಿದೆ. ಇದು ರೈತರ ಜೀವಿತಾವಧಿಗೆ ಧಕ್ಕೆ ತಂದಿದೆ. ಈ ಜಲಾಶಯವನ್ನು 70 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ಹಿಂದೆಯೂ ಇಲ್ಲಿ ಹಲವು ಸಮಸ್ಯೆಗಳು ತಲೆದೋರಿದ್ದವು. ನಾರಾಯಣಪುರ, ಆಲಮಟ್ಟಿ ಡ್ಯಾಂನಲ್ಲಿ ಸ್ಟಾಫ್ ಲಾಕ್ ಗೇಟ್ ಅಳವಡಿಸಲಾಗಿದೆ. ತುಂಗಭದ್ರಾ ಡ್ಯಾಂನಲ್ಲಿ ಸ್ಟಾಫ್ ಗೇಟ್ ಅಳವಡಿಕೆ ಮಾಡಿಲ್ಲದ ಕಾರಣ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಹೆಚ್‌ಡಿಕೆ ಹೇಳಿದ್ದಾರೆ.