October 15, 2026
Thursday, October 15, 2026
spot_img

ತಾತನಾದ ಸಂಭ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌: ಮಗಳು ಐಶ್ವರ್ಯಾಗೆ ಹೆಣ್ಣು ಮಗು ಜನನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪುತ್ರಿ ಐಶ್ವರ್ಯ ಹೆಗ್ಡೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಗಳು ಮಗುವಿಗೆ ಜನ್ಮ ನೀಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ತಾತನಾದ ಖುಷಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮುದ್ದು ಮೊಮ್ಮಗಳನ್ನು ಕಂಡು ಸಂಭ್ರಮಿಸಿದ್ದಾರೆ.

ಐಶ್ವರ್ಯಾ ಅವರು ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ರ ಅಮರ್ತ್ಯ ಹೆಗ್ಡೆ ಅವರನ್ನು 2021ರ ಫೆ.14 ರಂದು ವಿವಾಹವಾಗಿದ್ದರು.

ಮನೆಗೆ ಮಹಾಲಕ್ಷ್ಮೀ ಆಗಮನದಿಂದಾಗಿ ಡಿಕೆಶಿ ಕುಟುಂಬ ಮತ್ತು ಸಿದ್ಧಾರ್ಥ್ ಹೆಗ್ಡೆ ಅವರ ಕುಟುಂಬದಲ್ಲಿ ಹಬ್ಬದ ಕಳೆಯನ್ನು ತಂದಿದೆ.

ತಾತನಾಗಿ ಪ್ರಮೋಷನ್ ಪಡೆದಿರುವ ಡಿಸಿಎಂ ಡಿಕೆಶಿಗೆ ರಾಜಕೀಯ ಗಣ್ಯರು ಮತ್ತು ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Must Read