ಡಿಕಾಕ್, ಪೂರನ್, ಪಾಂಡ್ಯ ಅಬ್ಬರ: ಪಂಜಾಬ್ ಗೆಲುವಿಗೆ 200 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಂಜಾಬ್ ವಿರುದ್ಧ ಕ್ವಿಂಟನ್ ಡಿಕಾಕ್ , ನಾಯಕ ನಿಕೋಲಸ್ ಪೂರನ್ ಹಾಗೂ ಕ್ರುನಾಲ್ ಪಾಂಡ್ಯ ಅಬ್ಬರದ ಬ್ಯಾಟಿಂಗ್‌ನಿಂದ ಲಖನೌ ಸೂಪರ್ ಜೈಂಟ್ಸ್ 8 ವಿಕೆಟ್ ನಷ್ಟಕ್ಕೆ 199 ರನ್ ಸಿಡಿಸಿದೆ.
ಇದೀಗ 200 ರನ್ ಟಾರ್ಗೆಟ್ ಚೇಸ್ ಮಾಡಲು ಪಂಜಾಬ್ ಸಜ್ಜಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಲಖನೌ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕೆಎಲ್ ರಾಹುಲ್ 15 ರನ್ ಸಿಡಿಸಿ ನಿರ್ಗಮಿಸಿದರು. ಲಖನೌ 35 ರನ್‌ಗಳಿಗೆ ಮೊದಲ ವಿಕೆಟ್ ಕಳೆದಕೊಂಡಿತು. ಇದರ ಬೆನ್ನಲ್ಲೇ ದೇವದತ್ ಪಡಿಕ್ಕಲ್ ವಿಕೆಟ್ ಪತನಗೊಂಡಿತು. ಪಡಿಕ್ಕಲ್ ಕೇವಲ 9 ರನ್ ಸಿಡಿಸಿ ನಿರ್ಗಮಿಸಿದರು. ಕ್ವಿಂಟನ್ ಡಿಕಾಕ್ ಹೋರಾಟ ಮುಂದವರಿಸಿದರೆ, ಮಾರ್ಕಸ್ ಸ್ಟೊಯ್ನಿಸ್ 19 ರನ್ ಕಾಣಿಕೆ ನೀಡಿದರು.

ಡಿಕಾಕ್ ಹಾಫ್ ಸೆಂಚುರಿ ಸಿಡಿಸಿದರು. ನಾಯಕ ನಿಕೋಲಸ್ ಪೂರನ್ ಜೊತೆ ಸೇರಿ ಲಖನೌ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಡಿಕಾಕ್ 51 ರನ್ ಸಿಡಿಸಿ ಔಟಾದರು. ಇತ್ತ ಪೂರನ್ ಅಬ್ಬರ ಆರಂಭಗೊಂಡಿತು. ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದ ಪೂರನ್ 21 ಎಸೆತದಲ್ಲಿ 42 ರನ್ ಸಿಡಿಸಿದರು.

ಆಯುಷ್ ಬದೋನಿ ಕೇವಲ 8 ರನ್ ಸಿಡಿಸಿ ಔಟಾದರು. ಆದರೆ ಕ್ರುನಾಲ್ ಪಾಂಡ್ಯ ಸ್ಪೋಟಕ ಬ್ಯಾಟಿಂಗ್‌ನಿಂದ ಲಖನೌ ತಂಡ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಇದರ ನಡುವೆ ರವಿ ಬಿಶ್ನೋಯ್ ವಿಕೆಟ್ ಪತನಗೊಂಡಿತು. ಆದರೆ ಕ್ರುನಾಲ್ ಪಾಂಡ್ಯ ಅಬ್ಬರಿಸಿದರು. ಮೊಹ್ಸಿನ್ ಖಾನ್ ರನೌಟ್‌ಗೆ ಬಲಿಯಾದರು. ಆದರೆ ಹೋರಾಡಿದ ಕ್ರುನಾಲ್ ಪಾಂಡ್ಯ 22 ಎಸೆತದಲ್ಲಿ ಅಜೇಯ 43 ರನ್ ಸಿಡಿಸಿದರು. ಈ ಮೂಲಕ ಲಖನೌ ಸೂಪರ್ ಜೈಂಟ್ಸ್ 8 ವಿಕೆಟ್ ನಷ್ಟಕ್ಕೆ 199 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!