ಡಿ ಕಾಕ್ ಆಕರ್ಷಕ ಶತಕ: ಭಾರತಕ್ಕೆ ಗೆಲುವಿಗೆ 288 ರನ್​ಗಳ ಗುರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂತಿಮ ಏಕದಿನ ಪಂದ್ಯದಲ್ಲಿ ಆಫ್ರಿಕಾದ ವಿಕೆಟ್​ ಕೀಪರ್​ ಬ್ಯಾಟರ್​ ಕ್ವಿಂಟನ್​ ಡಿ ಕಾಕ್​ ಅವರ ಆಕರ್ಷಕ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಭಾರತಕ್ಕೆ 288 ರನ್​ಗಳ ಗೆಲುವಿನ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಫ್ರಿಕಾ, 70 ರನ್​ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್​ ಕಳೆದುಕೊಂಡಿತ್ತು. ಆರಂಭಿಕ ಆಟಗಾರ ಜನೆಮನ್​ ಮಲನ್​ (1) ಚಹರ್​ ಬೌಲಿಂಗ್​ನಲ್ಲಿ ಪಂತ್​​ಗೆ ಕ್ಯಾಚ್​ ನೀಡಿದರೆ, ನಾಯಕ ತೆಂಬಾ ಬವುಮಾ (8)ರನ್ನು ರಾಹುಲ್​ ರನೌಟ್​ ಮಾಡಿದರು. ಮಾರ್ಕ್ರಮ್​ 15 ರನ್​ ಗಳಿಸಿ ಸಬ್​ ರುತುರಾಜ್​ ಗಾಯಕ್ವಾಡ್​ಗೆ​ ಕ್ಯಾಚಿತ್ತು ಪೆವಿಲಿಯನ್​ ಸೇರಿಕೊಂಡಿದ್ದರು.
ಈ ಸಂದರ್ಭದಲ್ಲಿ ಒಂದಾದ ​ಕ್ವಿಂಟನ್​ ಡಿ ಕಾಕ್ ಹಾಗೂ ಡಸೆನ್ ( 144 ರನ್​ ಸೇರಿಸಿ ತಂಡಕ್ಕೆ ಆಸರೆಯಾದರು. ಭರ್ಜರಿ ಶತಕ ಬಾರಿಸಿದ ​ಕಾಕ್​ 130 ಎಸೆತಗಳಲ್ಲಿ 124 ರನ್​ ಗಳಿಸಿ ಬುಮ್ರಾ ಬೌಲಿಂಗ್​ನಲ್ಲಿ ಔಟಾದರು. ಡಸೆನ್​ ಅರ್ಧಶತಕದ ಬಳಿಕ ಚಹಲ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು.
ಬಳಿಕ ಡೆವಿಡ್​ ಮಿಲ್ಲರ್ 39, ಡ್ವೇನ್​ ಪ್ರೆಟೊರಿಯಸ್​ 20 ರನ್​ ಬಾರಿಸಿ ತಂಡದ ಮೊತ್ತಕ್ಕೆ ನೆರವಾದರು.
ಅಂತಿಮ ಓವರ್​ಗಳಲ್ಲಿ ವಿಕೆಟ್​ ಕಳೆದುಕೊಳ್ಳುತ್ತ ಸಾಗಿದ ದಕ್ಷಿಣ ಆಫ್ರಿಕಾ 49.5 ಓವರ್​ಗಳಲ್ಲಿ 287 ರನ್​ಗೆ ಸರ್ವಪತನ ಕಂಡಿತು.
ಭಾರತದ ಪರ ಬುಮ್ರಾ, ಚಹರ್​ ತಲಾ 2, ಪ್ರಸಿದ್ಧ್​​ ಕೃಷ್ಣ 3 ಹಾಗೂ ಚಹಲ್​ ಒಂದು ವಿಕೆಟ್​ ಕಬಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!