ಪಾದಚಾರಿಗಳೇ ಗಮನಿಸಿ…ಇನ್ಮುಂದೆ ಝೀಬ್ರಾ ಕ್ರಾಸ್ ಬಿಟ್ಟು ಬೇರೆಡೆ ರಸ್ತೆ ದಾಟಿದ್ರೆ ಬೀಳುತ್ತೆ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಂಚಾರ ನಿಯಮ ಉಲ್ಲಂಘಿಸಿದಂತ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುವುದು ನೋಡಿದ್ದೇವೆ, ಕೇಳಿದ್ದೇವೆ, ಆದರೆ ಇದೀಗ ಎಲ್ಲೆಂದರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ದಂಡ ಬೀಳಲಿದೆ ಅಂತೆ.
ಹೌದು, ಇದು ಬೇರೆ ಎಲ್ಲೂ ಅಲ್ಲ. ನಮ್ಮ ಬೆಂಗಳೂರಿನಲ್ಲೇ. ಇನ್ಮುಂದೆ ನಿಯಮ ಉಲ್ಲಂಘಿಸುವ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಚಿಂತನೆ ನಡೆಸಿದ್ದಾರೆ.
ಇನ್ನು ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ಫೈನ್ ಬೆಳಲ್ಲಿದ್ದು, ಶೀಘ್ರದಲ್ಲೇ ಈ ರೂಲ್ಸ್ ಜಾರಿಗೆ ಬರಲಿದೆ.
ಕಳೆದ ವರ್ಷ ಝೀಬ್ರಾ ಕ್ರಾಸ್ ಬಿಟ್ಟು ಬೇರೆಡೆ ರಸ್ತೆ ದಾಟುತ್ತಿದ್ದ ೬೯ ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಬಲಿಯಾಗಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸರು ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದರಲ್ಲಿ ರಸ್ತೆ ದಾಟುವ ಪಾದಚಾರಿಗಳಿಗೂ ಫೈನ್ ಹಾಕಲು ಸಿದ್ಧತೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!