ಆಘಾತಕಾರಿ ಘಟನೆ: ಟ್ರಾಲಿ ಬ್ಯಾಗ್​ನಲ್ಲಿತ್ತು ಹೋಟೆಲ್​ ಮಾಲೀಕನ ಶವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹೋಟೆಲ್ ಮಾಲೀಕರೊಬ್ಬರ ದೇಹದ ಭಾಗಗಳು ಟ್ರಾಲಿ ಬ್ಯಾಗ್‌ನಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಘಾಟ್ ರಸ್ತೆ ಬಳಿ ಈ ಬ್ಯಾಗ್​ ದೊರೆತಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೃತನನ್ನು ಸಿದ್ದಿಕ್ ಎಂದು ಗುರುತಿಸಲಾಗಿದ್ದು, ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದರು. ಈ ಕುರಿತು ಅವರ ಪುತ್ರ ದೂರನ್ನು ದಾಖಲಿಸಿದ್ದರು, ಬಳಿಕ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು.

ಮೇ 18 ಮತ್ತು 19ರ ನಡುವೆ ಸಿದ್ದಿಕ್​ ಕೊಲೆ ನಡೆದಿದ್ದು, ಕೊಲೆಗೈದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ರೈಲ್ವೆ ರಕ್ಷಣಾ ಪಡೆಯ ಸಹಾಯದಿಂದ ತಮಿಳುನಾಡಿನ ಚೆನ್ನೈನಲ್ಲಿ ಆರೋಪಿಗಳನ್ನು ಸೆರೆಹಿಡಿಯಲಾಗಿದ್ದು, ಸಿದ್ದಿಕ್ ಅವರ ಮಾಜಿ ಉದ್ಯೋಗಿ ಸೇರಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!