Friday, June 9, 2023

Latest Posts

ಹೊರಟಿದ್ದು ಕೊಲೆ ಮಾಡಲು… ಆದರೆ ಸೇರಿದ್ದು ಸ್ಮಶಾನದ ಮಡಿಲು!!

ಹೊಸದಿಗಂತ ವರದಿ ಮುಂಡಗೋಡ:

ಕೊಲೆ ಮಾಡಲು ಸಂಗಡಿಗರ ಜೊತೆ ತೆರಳಿದ್ದ ಪಟ್ಟಣದ ಯುವಕನೊಬ್ಬ ತಾನೇ ಕೊಲೆಯಾದ ಘಟನೆ ಗುರುವಾರ ರಾತ್ರಿ ಧಾರಡದಲ್ಲಿ ನಡೆದಿದೆ.

ಕೊಲೆಯಾದ ಯುವಕ ಗಣೇಶ ಕಮ್ಮಾರ ಎಂಬಾತನಾಗಿದ್ದು ಈತನು ಮುಂಡಗೋಡ ಪಟ್ಟಣದ ದೇಶಪಾಂಡೆ ನಗರದ ನಿವಾಸಿಯಾಗಿದ್ದಾನೆ.

ಘಟನೆಯ ವಿವರ:

ಧಾರವಾಡದ ಮಹಮ್ಮದ್ ಸಾಬ್ ರಹಮಾನ್‌ ಸಾಬ್ ಕುಡಚಿ 43 ವರ್ಷ ಎಂಬಾತನಿಗೆ ಹಾಗೂ ಅರ್ಬಜ್ ಪ್ರುಟ್ ಇರ್ಫಾನ್ ಇವರಿಬ್ಬರ ನಡುವೆ ಯಾವುದೋ ಒಂದು ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಹಣದ ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿತ್ತು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಆರೋಪಿಯಾದ ಅರ್ಬಜ್ ತನ್ನ ಐದು ಜನ ಸಂಗಡಿಗರೊಂದಿಗೆ ಮಾರಕಾಸ್ತ್ರಗಳನ್ನು ಹಿಡಿದು ಗುಂಪು ಕಟ್ಟಿಕೊಂಡು ಬಂದು ಮಹಮ್ಮದ್ ಸಾಬ್ ಕುಡಚಿಗೆ ಬೆದರಿಕೆ ಹಾಕಿದ್ದಾರೆ. ಬಳಿಕ ಈ ವ್ಯವಹಾರ ಇಲ್ಲಿಗೆ ಬಿಡು ಎಂದು ಹೇಳಿ ಕಾರದ ಪುಡಿ ಎರಚಿ ರಿವಾಲ್‌ವಾರ್‌ನಿಂದ ಗುಂಡು ಹಾರಿಸಿದ್ದಲ್ಲದೆ, ತಮ್ಮ ಕೈಯಲ್ಲಿ ಇದ್ದ ಆಯುಧಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ದೂರುದಾರನ ತಮ್ಮನಾದ ಹಜರತ್ ಅಲಿ ಎಂಬುವರಿಗೂ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಹಲ್ಲೆ ಮಾಡಲು ಹೋದ ಐವರಲ್ಲಿ ಎದರುರಾಳಿಯನ್ನು ಹೊಡೆಯಲು ಹೋಗಿ ತಮ್ಮ ಗುಂಪಿನಲ್ಲಿರುವ ಮುಂಡಗೋಡದ ಯುವಕ ಗಣೇಶ ಕಮ್ಮಾರ ಎಂಬ ಯುವಕನಿಗೆ ಮಾರಕಾಸ್ತ್ರ ದಿಂದ ಹೊಡೆತ ಬಿದ್ದು ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಮುಂಡಗೋಡದ ಕೊಲೆಯಾದ ಯುವಕ ಗಣೇಶ ಕಮ್ಮಾರ ಬೆಂಗಳೂರಿನ ನರ್ಸಿಂಗ್ ಹೋಮ್ ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ ಎನ್ನಲಾಗಿದೆ. ತನ್ನ ಗೆಳೆಯರ ಗುಂಪಿನೊಂದಿಗೆ ಬೇರೆಯವರ ಕೊಲೆ ಮಾಡಲು ಹೋಗಿ ತನ್ಮ ಗೆಳೆಯರಿಂದಲೇ ದಾರುಣವಾಗಿ ಹತ್ಯೆಗೊಳಗಾಗಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!