ಭಯಾನಕ ಘಟನೆ| ಮಹಿಳೆಯ ಶವ ತಿಂದು ಹಾಕಿದ 20ಬೆಕ್ಕುಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮ್ಮ ಮಾಲೀಕಳನ್ನು ಸಾಕು ಬೆಕ್ಕುಗಳು ತಿಂದು ಹಾಕಿರುವ ಭಯಾನಕ ಘಟನೆ ರಷ್ಯಾದಲ್ಲಿ ನಡೆದಿದೆ. ಎರಡು ವಾರಗಳಿಂದ ತನ್ನ ಸ್ನೇಹಿತೆ  ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿದ ಬಳಿಕ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಮೃತ ಮಹಿಳೆ ದೇಹವನ್ನು ಸಾಕು ಬೆಕ್ಕುಗಳು ತಿಂದು ಹಾಕಿವೆ ಎಂದಿದ್ದಾರೆ.

ರಷ್ಯಾ ನಗರದ ಬಟೈಸ್ಕ್ ಪ್ರದೇಶದಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಎರಡು ವಾರಗಳ ಹಿಂದೆ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಬೆಕ್ಕುಗಳಿಗೆ ಆರೈಕೆ ಮಾಡುವವರಿಲ್ಲದೆ, ಹಸಿವಿನಿಂದ ಕಂಗೆಟ್ಟಿದ್ದ ಬೆಕ್ಕುಗಳು ಸತ್ತ ಮಹಿಳೆಯ ದೇಹವನ್ನು ಇಪ್ಪತ್ತು ಬೆಕ್ಕುಗಳು ತಿಂದು ಹಾಕಿವೆ ಎಂದು ಪ್ರಾಣಿ ರಕ್ಷಣಾ ತಜ್ಞರು ಹೇಳಿದ್ದಾರೆ.

ಬೆಕ್ಕುಗಳು ತಿಂದು ಹಾಕಿರುವ ದೇಹದ ಉಳಿದ ಭಾಗ ಪತ್ತೆಯಾಗಿದ್ದು, ಮಹಿಳೆಯ ಮೃತದೇಹ ಕೊಳೆ ದುರ್ವಾಸನೆ ಬರುತಿದೆ. ಶವದ ಅಕ್ಕಪಕ್ಕ ಕೆಲ ಬೆಕ್ಕುಗಳು ಸಹ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!