ಎಎನ್‌ಐಗೆ ಅಜಿತ್‌ ದೋವಲ್‌ ಸಂದರ್ಶನ : ಹೊಸತಲೆಮಾರಿನ ಯುದ್ಧ, ಅಗ್ನಿಪಥ ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
“ಹೊಸ ತಲೆಮಾರಿನ ಯುದ್ಧಕ್ಕೆ ನಾವು ಸಜ್ಜಾಗಬೇಕೆಂದರೆ ಅಗ್ನಿಪಥದಂತಹ ಯೋಜನೆ ಅತೀ ಅವಶ್ಯಕವಾದದ್ದು. ತಂತ್ರಜ್ಞಾನ ಜಾಗತಿಕವಾಗಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿರುವ ಸಂದರ್ಭದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಪರಿವರ್ತನೆ ತರುವುದು ಅನಿವಾರ್ಯ, ಅತ್ಯಂತ ಅಗತ್ಯವೂ ಹೌದು. ಈ ನಿಟ್ಟಿನಲ್ಲಿ ಅಗ್ನಿಪಥವೆಂಬುದು ಸದೃಢ ಯುವಕರ ಚಾಣಾಕ್ಷ ರಕ್ಷಣಾ ವ್ಯವಸ್ಥೆ ನಿರ್ಮಿಸಲು ಸಹಕಾರಿಯಾಗಿದೆ” ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಏಎನ್‌ಐ ಸುದ್ಧಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ದೇಶಾದ್ಯಂತ ಅಗ್ನಿಪಥವನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ರಾಷ್ಟ್ರೀಯ ಸುರಕ್ಷತೆಯಲ್ಲಿ ಅಗ್ನಿಪಥದ ಅವಶ್ಯಕತೆಯೇನು ಎಂಬುದನ್ನು ಹೇಳಿರುವ ಅವರ ಮಾತಿನ ಸಾರಾಂಶ ಹೀಗಿದೆ.

  • ಜಗತ್ತು ಹೊಸ ತಲೆಮಾರಿನ ಯುದ್ಧಗಳತ್ತ ತೆರೆದುಕೊಳ್ಳುತ್ತಿದೆ. ಸಂಪರ್ಕವಿಲ್ಲದ ಅಗೋಚರ ಶತ್ರುವಿನೊಂದಿಗೆ ಹೋರಾಡಲು ಸಜ್ಜಾಗಬೇಕಿದೆ. ಸಂಪರ್ಕರಹಿತ ಯುದ್ಧಗಳನ್ನು ಎದುರಿಸಲು ದೇಶಕ್ಕೆ ಸದೃಢ ಯುವಕರ ಚಾಣಾಕ್ಷ ಸೇನೆಯ ಅಗತ್ಯತೆಯಿದೆ.
  • ತಂತ್ರಜ್ಞಾನವು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಈ ಸಂದರ್ಭದಲ್ಲಿ ನಾವೂ ಕೂಡ ನಾಳೆಗಳಿಗೆ ಸಜ್ಜಾಗಬೇಕು. ನಾಳೆಗೆ ಸಜ್ಜಾಗಬೇಕೆಂದರೆ ಅದಕ್ಕೆ ಬೇಕಾದ ಅಗತ್ಯ ಬದಲಾವಣೆಯೂ ಅವಶ್ಯಕ.
  • ರಾಷ್ಟ್ರೀಯ ಭದ್ರತೆಯೆಂಬುದು ರಾಷ್ಟ್ರೀಯ ಹಿತಾಸಕ್ತಿ ಮತ್ತು ರಾಷ್ಟ್ರೀಯ ಸ್ವತ್ತುಗಳ ರಕ್ಷಣೆಗೆ ಸಂಬಂಧಿಸಿದ ಕ್ರಿಯಾತ್ಮಕ ಪರಿಕಲ್ಪನೆ ಅದು ನಿಂತ ನೀರಾಗಲು ಸಾಧ್ಯವಿಲ್ಲ.
  • ಅಗ್ನಿಪಥ್‌ ಎಂಬುದು ಸ್ವತಂತ್ರ ಯೋಜನೆಯಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಅದು ಭಾರತವನ್ನು ಸುರಕ್ಷಿತ ಮತ್ತು ಬಲಿಷ್ಟವಾಗಿಸಲು ಇರುವ ಹಲವು ಆಯಾಮಗಳಲ್ಲೊಂದು.
  • ವಿಶಾಲವಾಗಿ ಹೇಳುವುದಾದರೆ ನಮಗೆ ಭವಿಷ್ಯದತ್ತ ಕೊಂಡೊಯ್ಯಬಲ್ಲ ಹೊಸ ತಲೆಮಾರಿನ ಉಪಕರಣಗಳು ಬೇಕು, ಅದಕ್ಕೆ ವ್ಯವಸ್ಥೆಗಳು ಮತ್ತು ರಚನೆಗಳಲ್ಲಿ ಬದಲಾವಣೆ ಬೇಕು, ತಂತ್ರಜ್ಞಾನದಲ್ಲಿ ಬದಲಾವಣೆ ಬೇಕು, ಮಾನವಶಕ್ತಿ, ನೀತಿಗಳಲ್ಲಿ ಬದಲಾವಣೆ ಬೇಕು. ಆ ನಿಟ್ಟಿನಲ್ಲಿ ಅಗ್ನಿಪಥವು ಪರಿವರ್ತಕ ಯೋಜನೆ.
  • ಈ ಯೋಜನೆಯ ಮೂಲಕ ದೇಶವನ್ನು ರಕ್ಷಿಸಬೇಕೆಂಬ ಉತ್ಕಟ ಬಯಕೆ ಮತ್ತು ಪ್ರೇರಣೆ ಹೊಂದಿರುವ ಪ್ರತಿಯೊಬ್ಬ ಯುವಕರಿಗೂ ಅವಕಾಶ ಸಿಗುತ್ತದೆ ಮತ್ತು ಅವರ ಪ್ರತಿಭೆ ಮತ್ತು ಕೌಶಲ್ಯವನ್ನು ದೇಶವನ್ನು  ಬಲಪಡಿಸಲು ಬಳಸಲಾಗುತ್ತದೆ.
  • ಇನ್ನು ಪ್ರತಿಭಟನೆಗಳ ವಿಚಾರಕ್ಕೆ ಬರುವುದಾದರೆ, ಪ್ರತಿಭಟಿಸುವುದು ಮತ್ತು ಆಗ್ರಹಿಸುವುದು ಪ್ರಜಾಪ್ರಭುತ್ವದಲ್ಲಿ ಅಂಗೀಕಾರರಾರ್ಹವಾದುದು. ಆದರೆ ಬೆಂಕಿ ಹಚ್ಚುವ ನಾಶ ಮಾಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಅದನ್ನು ಸಹಿಸಲು ಸಾಧ್ಯವಿಲ್ಲ.
  • ಇನ್ನು ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಬರುವುದಾದರೆ ಬಾರತವು ತನ್ನ ನೆರೆಯೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಪಾಕಿಸ್ತಾನದೊಂದಿಗೂ ಉತ್ತಮ ಸಂಬಂಧವೇ ಇದೆ. ಆದರೆ ಭಯೋತ್ಪಾದನೆಯ ವಿಷಯದಲ್ಲಿ ಸಹಿಷ್ಣುತೆಯ ಮಿತಿ ಕಡಿಮೆಯಾಗಿದೆಯಷ್ಟೆ.ನಾವು ಶಾಂತಿಯನ್ನು ಯಾವುದೇ ಸಂದರ್ಭದಲ್ಲೂ ಬೇಡುವುದಿಲ್ಲ.
  • ನಮ್ಮ ಎದುರಾಳಿಯ ಆಯ್ಕೆಯ ಸಂದರ್ಭದಲ್ಲಿ ಶಾಂತಿ ಮತ್ತು ಯುದ್ಧವನ್ನು ಒಟ್ಟಿಗೇ ಹೊಂದಲು ಸಾಧ್ಯವಿಲ್ಲ. ನಮ್ಮ ಹಿತಾಸಕ್ತಿಗಳನ್ನು ಕಾಪಾಡಬೇಕಾದರೆ ಯಾವಾಗ ಮತ್ತು ಯಾರೊಂದಿಗೆ ಮತ್ತು ಯಾವ ನಿಯಮಗಳ ಮೇಲೆ ನಾವು ಶಾಂತಿಯನ್ನು ಹೊಂದಬೇಕು ಎಂಬುದನ್ನು ನಾವು ನಿರ್ಧರಿಸಬೇಕು.
  • 2019 ರ ನಂತರ, ಕಾಶ್ಮೀರದ ಜನರ ಮನಸ್ಥಿತಿ ಮತ್ತು ಮನೋಭಾವವು ಸಂಪೂರ್ಣವಾಗಿ ಬದಲಾಗಿದೆ. ಜನರು ಈಗ ಪಾಕಿಸ್ತಾನದ ಭಯೋತ್ಪಾದನೆಯ ಪರವಾಗಿಲ್ಲ. ಕಾಶ್ಮೀರಿ ಹಿಂದುಗಳು ದುರ್ಬಲ ವರ್ಗದಲ್ಲಿದ್ದಾರೆ. ಅವರನ್ನು ರಕ್ಷಿಸುವ ಅಗತ್ಯವಿದೆ.ಭಯೋತ್ಪಾದನೆಯ ವಿರುದ್ಧ ಆಕ್ರಮಣಕಾರಿ ನೀತಿಯೇ ಸರಿಯಾದ್ದು.
  • ಚೀನಾದ ವಿಷಯಕ್ಕೆ ಬರುವುದಾದರೆ “ಬಹಳ ಹಿಂದಿನಿಂದಲೂ ನಾವು ಗಡಿ ಸಮಸ್ಯೆಯನ್ನು ಹೊಂದಿದ್ದೇವೆ. ಯಾವುದೇ ಸಮಯದಲ್ಲೂ ಗಡಿ ಉಲ್ಲಂಘನೆಯನ್ನು ಭಾರತ ಸಹಿಸಿಸುವುದಿಲ್ಲ ಎಂಬುದನ್ನು ಚೀನಾಕ್ಕೆ ಸ್ಪಷ್ಟವಾಗೇ ಹೇಳಲಾಗಿದೆ. ಅದೂ ಅವರಿಗೂ ತಿಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!