ಇಸ್ಲಾಮಿಕ್ ಸ್ಟೇಟ್ ಗುಂಪಿನ ನಾಯಕ ಅಬು ಹಸನ್ ಅಲ್ ಹಶಿಮಿ ಅಲ್ ಖುರಾಶಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಇಸ್ಲಾಮಿಕ್ ಸ್ಟೇಟ್ (ಐಸಿಸ್)ಜೆಹಾದಿ ಭಯೋತ್ಪಾದಕ ಗುಂಪಿನ ನಾಯಕ ಎನ್ನಲಾದ ಅಬು ಹಸನ್ ಅಲ್ ಹಾಷ್ಮಿ ಅಲ್ ಖುರೇಷಿಯನ್ನು ವಿರೋಗಳು ಯುದ್ಧದಲ್ಲಿ ಕೊಂದಿರುವುದನ್ನು ಈಗ ಭಯೋತ್ಪಾದಕ ಗುಂಪೇ ಒಪ್ಪಿಕೊಂಡಿದೆ.ಈತ ಇರಾಕಿ ಮೂಲದವನಾಗಿದ್ದಾನೆ.

ತನ್ನ ನಾಯಕನನ್ನು ದೇವರ ವೈರಿಗಳು ಯುದ್ಧದಲ್ಲಿ ಕೊಂದಿದ್ದಾರೆ ಎಂದು ಅದು ಹೇಳಿಕೊಂಡಿದೆ.ಆದರೆ ಆತನ ಹತ್ಯೆ ಯಾವಾಗ ಮತ್ತು ಎಲ್ಲಿ ನಡೆಯಿತು ಎಂಬುದನ್ನು ಭಯೋತ್ಪಾದಕ ಗುಂಪಿನ ವಕ್ತಾರ ಬಹಿರಂಗಪಡಿಸಿಲ್ಲ.ಆತನ ಸ್ಥಾನಕ್ಕೆ ಅಬು ಅಲ್ ಹುಸೈನ್ ಅಲ್ ಹುಸೈನಿ ಅಲ್ ಖುರೇಷಿ ಎಂಬಾತನನ್ನು ನೇಮಿಸಿರುವುದಾಗಿ ತಿಳಿಸಲಾಗಿದೆ.ಆದರೆ ಈತನ ಹಿನ್ನೆಲೆಯನ್ನೂ ಗುಂಪು ಬಹಿರಂಗಪಡಿಸಿಲ್ಲವಾದರೂ “ಹಿರಿಯ “ಜೆಹಾದಿಗೆ ಎಲ್ಲ ಗುಂಪುಗಳೂ ನಿಷ್ಠವಾಗಿವೆ ಎಂದು ಹೇಳಿಕೊಳ್ಳಲಾಗಿದೆ.ಸಿರಿಯ ಮತ್ತು ಇರಾಕಿನಲ್ಲಿ ಕಾರ್ಯಾಚರಿಸುತ್ತಿದ್ದ ಐಸಿಸ್ ೨೦೧೪ರಲ್ಲಿ ಬಹುಭಾಗವನ್ನು ಆವರಿಸಿದ್ದರೂ, ಅದನ್ನು 2017ರಲ್ಲಿ ಸೋಲಿಸಿ ನಿಗ್ರಹಿಸಲಾಯಿತು.ಆದರೆ ಒಂದಷ್ಟು ಸ್ಲೀಪರ್ ಸೆಲ್‌ಗಳು ಇನ್ನೂ ಅಲ್ಲಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿವೆ.

ಐಸಿಸ್‌ನ ಹಿಂದಿನ ನಾಯಕ ಅಬು ಇಬ್ರಾಹಿಂ ಅಲ್ ಖುರೇಷಿಯನ್ನು ಸಿರಿಯಾದಲ್ಲಿ ಫೆಬ್ರವರಿಯಲ್ಲಿ ನಡೆದ ಅಮೆರಿಕನ್ ದಾಳಿಯೊಂದರಲ್ಲಿ ಕೊಲ್ಲಲಾಗಿತ್ತು.ಗುಂಪಿನ ಹಿಂದಿನ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿಯನ್ನು 2019ರ ಅಕ್ಟೋಬರ್‌ನಲ್ಲಿ ಕೊಂದ ಬಳಿಕ ಗುಂಪಿನ ಅಟ್ಟಹಾಸಕ್ಕೆ ತಡೆ ಬಿದ್ದಿತ್ತು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!