ಯುಟರ್ನ್‌ ಹೊಡೆದ ಲ್ಯಾಪಿಡ್‌: ‘ದಿ ಕಾಶ್ಮೀರ್‌ ಫೈಲ್ಸ್‌’ ಅದ್ಭುತ ಸಿನಿಮಾ ಎಂದ ಇಸ್ರೇಲ್‌ ನಿರ್ದೇಶಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಶ್ಮೀರ ಪಂಡಿತರ ಹತ್ಯಾಕಾಂಡದ ಚಿತ್ರಣವಿರುವ ‘ದಿ ಕಾಶ್ಮೀರ್‌ ಫೈಲ್ಸ್‌’ (The Kashmir Files) ಸಿನಿಮಾ ‘ಪ್ರಪಗಂಡ’ ಇರುವ ಸಿನಿಮಾ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾದ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಆಫ್‌ ಇಂಡಿಯಾ (IFFI)ದ ಜ್ಯೂರಿ, ಇಸ್ರೇಲ್‌ ಸಿನಿಮಾ ನಿರ್ದೇಶಕ ನಡಾವ್‌ ಲ್ಯಾಪಿಡ್‌ ಇದೀಗ ಯುಟರ್ನ್‌ ತೆಗೆದುಕೊಂಡಿದ್ದಾರೆ.

ಇದೀಗ ದಿ ಕಾಶ್ಮೀರ್‌ ಫೈಲ್ಸ್‌ ಒಂದು ಅದ್ಭುತ ಸಿನಿಮಾ ಎಂದು ಬಣ್ಣಿಸಿದ್ದಾರೆ.

ಸಿನಿಮಾದಲ್ಲಿ ಯಾವ ಪ್ರಪಗಂಡ ಇದೆ ಎಂಬುದನ್ನು ನಿರ್ಧರಿಸಲು ಯಾರಿಂದಲೂ ಸಾಧ್ಯವಿಲ್ಲ. ತುಂಬ ಜನ ಇದನ್ನು ವೀಕ್ಷಿಸಿದ್ದಾರೆ ಹಾಗೂ ಅದು ಅವರಿಗೆ ಅದ್ಭುತ ಸಿನಿಮಾ ಆಗಿರಬಹುದು. ನಾನು ಜನರ ಭಾವನೆಗಳಿಗೆ ಗೌರವ ನೀಡುತ್ತೇನೆ. ಅಷ್ಟಕ್ಕೂ, ನಾನು ಹೇಳಿದ್ದೇ ಅಂತಿಮ ಅಲ್ಲ. ಅಷ್ಟಕ್ಕೂ, ನಾನು ನನ್ನ ದೃಷ್ಟಿಕೋನ, ನಾನು ನೋಡಿದ್ದು, ಕಂಡಿದ್ದನ್ನು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಗೋವಾದಲ್ಲಿ ನಡೆದ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಆಫ್‌ ಇಂಡಿಯಾ (IFFI) ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ಲ್ಯಾಪಿಡ್‌, ‘ದಿ ಕಾಶ್ಮೀರ್‌ ಫೈಲ್ಸ್‌ ಪ್ರಪಗಂಡ ಒಳಗೊಂಡಿರುವ ಸಿನಿಮಾ’ ಎಂದಿದ್ದರು. ಇದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!