ಚೀನಾದಲ್ಲಿ ಕೋವಿಡ್ ಭೀತಿ: ಸೆಲೆಬ್ರಿಟಿಗಳ ಸಾವಿನಿಂದ ಜನರಲ್ಲಿ ಹೆಚ್ಚಿದೆ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ಕೋವಿಡ್ ಭೀತಿ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಸೆಲೆಬ್ರಿಟಿಗಳು ಕೊರೋನಾಗೆ ತುತ್ತಾಗಿದ್ದಾರೆ. ನಿಖರವಾಗಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಲಭಿಸಿಲ್ಲವಾದರೂ, ಸಾಕಷ್ಟು ಸೆಲೆಬ್ರಿಟಿಗಳ ಸಾವಿನ ಸುದ್ದಿ ಜನರ ನಿದ್ದೆಗೆಡಿಸಿದೆ.

ಒಪೆರಾ ಹಾಡುಗಾರ್ತಿ ಚು ಲನ್ಲನ್ ಮೃತಪಟ್ಟಿದ್ದು, ಸಾವಿನ ಕಾರಣವನ್ನು ಕುಟುಂಬದವರು ಬಹಿರಂಗಪಡಿಸಿಲ್ಲ. ಇತ್ತೀಚೆಗಷ್ಟೇ ಚೀನಾ ತನ್ನ ಕೋವಿಡ್ ನೀತಿಯನ್ನು ವಾಪಾಸ್ ಪಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗಳು, ಸ್ಮಶಾನಗಳು ತುಂಬಿ ತುಳುಕುತ್ತಿವೆ. ಈ ಮಧ್ಯೆ ಚೀನಾ ಸೆಲೆಬ್ರಿಟಿಗಳ ಸಾವಿನ ಕಾರಣವನ್ನು ಮುಚ್ಚಿಟ್ಟಂತೆ ಕಾಣುತ್ತಿದೆ. ಇತ್ತೀಚೆಗಷ್ಟೇ ನಟ ಗಾಂಗ್ ಜಿನ್ತಾಂಗ್ ನಿಧನದ ಸುದ್ದಿ ಚೀನಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!