ಮರಕಡ ಶ್ರೀ ಗುರು ಪರಾಶಕ್ತಿ ಮಠದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ನಿಧನ

ದಿಗಂತ ವರದಿ ಮಂಗಳೂರು:

ನಗರ ಹೊರವಲಯದ ಮರಕಡ ಶ್ರೀ ಗುರು ಪರಾಶಕ್ತಿ ಮಠದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಗುರುವಾರ ನಸುಕಿನ ವೇಳೆ ಮರಕಡ ಮಠದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದ ಇವರು ಮರಕಡದಲ್ಲಿ ಮೂಲ ಮಠ ಹೊಂದಿದ್ದರು. ತೊಕ್ಕೊಟ್ಟು ಸಮೀಪದ ಮಡ್ಯಾರ್ ಎಂಬಲ್ಲಿ ದೇವಸ್ಥಾನ ನಿರ್ಮಿಸಿದ್ದರು.
ಕಂರ್ಬಿಸ್ಥಾನ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ನವೀಕರಣ ಕಾರ್ಯದಲ್ಲೂ ಮಹತ್ವದ ಪಾತ್ರ ನಿರ್ವಹಿಸಿದ್ದರು. ಮರಕಡದಲ್ಲಿ ಹೊಸ ದೇವಸ್ಥಾನ ಹಾಗೂ ಗುರು ಪೀಠ ನಿರ್ಮಾಣ ಹಂತದಲ್ಲಿದ್ದು ಮುಂದಿನ ತಿಂಗಳು ಗುರು ಪೀಠ ಲೋಕಾರ್ಪಣೆ, ಮೇ ತಿಂಗಳಲ್ಲಿ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!