ಭಾರತ ಮೂಲದ ಸತ್ಯ ನಡೆಲ್ಲಾ ವಿಶ್ವದ ನಂ.1 ಸಿಇಒ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರ್ಯಾಂಡ್ ಫೈನಾನ್ಸ್ ವಿಶ್ವದ ಟಾಪ್ ಸಿಇಒಗಳ ಲಿಸ್ಟ್ ಬಿಡುಗಡೆ ಮಾಡಿದ್ದು, ಮೈಕ್ರೋಸಾಫ್ಟ್‌ನ ಸತ್ಯ ನಡೆಲ್ಲಾ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತ ಮೂಲದ ನಡೆಲ್ಲಾ ವಿಶ್ವದ ನಂ. 1 ಸಿಇಒ ಬಿರುದು ಪಡೆದು ಮತ್ತೊಂದು ಸಾಧನೆ ಮಾಡಿದ್ದಾರೆ.
ಮೈಕ್ರೋಸಾಫ್ಟ್‌ನ ಭವಿಷ್ಯವನ್ನು ಉನ್ನತೀಕರಿಸಿದ ಕೀರ್ತಿಗೆ ಸತ್ಯ ನಡೆಲ್ಲಾ ಪಾತ್ರರಾಗಿದ್ದಾರೆ. ಕಂಪನಿಯ ಸಂಸ್ಕೃತಿ, ನಾವೀನ್ಯತೆ ಹಾಗೂ ಟೀಂ ವರ್ಕ್ ಮೂಲಕ ಉನ್ನತ ಹಂತಕ್ಕೆ ತಲುಪಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾರತದ ಹಲವು ಸಿಇಒಗಳೂ ಈ ಪಟ್ಟಿಯಲ್ಲಿ ಇದ್ದಾರೆ. ಗೂಗಲ್‌ನ ಸುಂದರ್ ಪಿಚ್ಚೈ ಐದನೇ ಸ್ಥಾನದಲ್ಲಿದ್ದರೆ, ಅಡೋಬ್‌ನ ಶಾಂತನು ನಾರಾಯಣ್ ಆರನೇ ಸ್ಥಾನದಲಿದ್ದಾರೆ. ಇನ್ನು ಡೆಲಾಯ್ಟ್‌ನ ಪುನೀತ್ ರಂಜನ್ 14 ನೇ ಸ್ಥಾನದಲ್ಲಿದ್ದಾರೆ. ಟಾಟಾದ ಎನ್. ಚಂದ್ರಶೇಖರ್ 25ನೇ ಸ್ಥಾನದಲ್ಲಿದ್ದರೆ, ಮಹಿಂದ್ರಾ & ಮಹಿಂದ್ರಾದ ಆನಂದ್ ಮಹೀಂದ್ರ 41ನೇ ಸ್ಥಾನದಲ್ಲಿದ್ದಾರೆ. ರಿಲಯನ್ಸ್‌ನ ಮುಖೇಶ್ ಅಂಬಾನಿಗೆ 42ನೇ ಸ್ಥಾನ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದಿನೇಶ್ ಕುಮಾರ್‌ಗೆ 46 ಸ್ಥಾನ ದಕ್ಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!