ಹರಿಯಾಣದ ನಾಲ್ವರು ಶಾಸಕರಿಗೆ ಕೊಲೆ ಬೆದರಿಕೆ: ಪಾಕ್​ನಲ್ಲಿ ಮೊಬೈಲ್​ ಸಂಖ್ಯೆ​ ಆ್ಯಕ್ಟಿವ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಹರಿಯಾಣದ ನಾಲ್ವರು ಶಾಸಕರಿಗೆ ವಿದೇಶದಿಂದ ಕೊಲೆ ಬೆದರಿಕೆ ಮತ್ತು ಸುಲಿಗೆ ಕೆರೆಗಳು ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜೂನ್ 24ರಿಂದ 28 ರವರೆಗೆ ಬೆದರಿಕೆ ಕರೆಗಳು ಬಂದಿದ್ದು, ಈ ಕುರಿತು ಪತ್ತೆಹಚ್ಚುವ ವೇಳೆ ಮಧ್ಯಪ್ರಾಚ್ಯದ ದೇಶಗಳ ವಿವಿಧ ದೂರವಾಣಿ ಸಂಖ್ಯೆಗಳಿಂದ ಬಂದಿರುವುದು ಗೊತ್ತಾಗಿದೆ .

ದೂರವಾಣಿ ಸಂಖ್ಯೆಗಳು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೋಂದಾಯಿಸಲಾಗಿದೆ ಮತ್ತು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಮೊಬೈಲ್‌ಗಳ ತಾಂತ್ರಿಕ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಈ ಬೆದರಿಕೆ ಕೆರೆಗಳ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಎಸ್​ಪಿ ನೇತೃತ್ವದಲ್ಲಿ ವಿಶೇಷ ತಂಡ ಮಾಡಲಾಗಿದೆ.

ಇನ್ನು ಇದೇ ಸಂಖ್ಯೆಗಳಿಂದ ಪಂಜಾಬ್‌ನ ಕೆಲವು ಮಾಜಿ ಶಾಸಕರಿಗೂ ಬೆದರಿಕೆ ಕೆರೆಗಳು ಬಂದಿವೆ. ಶಾಸಕರೊಂದಿಗಿನ ಸಂಭಾಷಣೆಯ ಸಮಯದಲ್ಲಿ ಮುಂಬೈಕರ್ ಮತ್ತು ಪಂಜಾಬಿ ಭಾಷೆಯಂತಹ ವಿಭಿನ್ನ ಸ್ವರಗಳು ಮತ್ತು ಸಂಭಾಷಣೆಯ ಶೈಲಿಗಳನ್ನು ಬಳಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣಗಳ ತನಿಖೆಗಾಗಿ ಐಜಿಪಿ (ಎಸ್‌ಟಿಎಫ್) ಸತೀಶ್ ಬಾಲನ್ ಅವರು ಎಸ್‌ಪಿ ಸುಮಿತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಎರಡು ವಾರಗಳ ಕಾಲ ನಡೆದ ಈ ತನಿಖೆ ಮೇಲೆ ಡಿಜಿಪಿ ಅಗರವಾಲ್ ಖುದ್ದು ನಿಗಾ ವಹಿಸಿದ್ದರು.

ಇದೇ ಬೆದರಿಕೆ ಕೆರೆಗಳ ವಿಷಯವಾಗಿ ಜುಲೈ 19ರಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!