ಉಗ್ರರ ವಿರುದ್ಧ ಹೋರಾಟದಲ್ಲಿ ಹುತಾತ್ಮನಾದ ಅಲೆಕ್ಸ್: ಸೇನಾ ಶ್ವಾನಕ್ಕೆ ಕಣ್ಣೀರ ವಿದಾಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಉಗ್ರರ ವಿರುದ್ದದ ಕಾರ್ಯಾಚರಣೆಯಲ್ಲಿ ಸೇನಾ ಶ್ವಾನ ಆಕ್ಸೆಲ್ ಹುತಾತ್ಮನಾಗಿದೆ.

ಶನಿವಾರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ವಾಣಿಗಂಬಳದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಂದರ್ಭ ಭಯೋತ್ಪಾದಕರು ಮೂರು ಬಾರಿ ಗುಂಡು ಹಾರಿಸಿದ್ದು, ಈ ವೇಳೆ ಸೇನಾ ಶ್ವಾನ ‘ಆಕ್ಸೆಲ್’ ಪ್ರಾಣಾರ್ಪಣೆ ಮಾಡಿದೆ.

ಅಲೆಕ್ಸ್, ಕೇವಲ ಎರಡು ವರ್ಷ ವಯಸ್ಸಿನ ತಿಳಿ ಕಂದು ಬಣ್ಣದ ಬೆಲ್ಜಿಯನ್ ಮಾಲಿನೊಯಿಸ್ ತಳಿಯ ಶ್ವಾನವಾಗಿದ್ದು, 26ನೇ ಆರ್ಮಿ ಶ್ವಾನ ಘಟಕದ ಭಾಗವಾಗಿದ್ದರು. ಅಲೆಕ್ಸ್‌ನನ್ನು 29 ರಾಷ್ಟ್ರೀಯ ರೈಫಲ್ಸ್ ಘಟಕದೊಂದಿಗೆ 10ನೇ ಸೆಕ್ಟರ್ ಆರ್‌ಆರ್ ಪ್ರತಿ ಬಂಡಾಯ ಪಡೆಗಳ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಆಲೆಕ್ಸ್ ಹಾಗೂ ಮತ್ತೊಂದು ಆರ್ಮಿ ಡಾಗ್ ‘ಬಾಲಾಜಿ’ ಈ ಕಾರ್ಯಾಚರಣೆಯ ಭಾಗವಾಗಿದ್ದರು.

ಆರಂಭದಲ್ಲಿ, ಕಟ್ಟಡದ ಒಳಗೆ ಬಾಲಾಜಿಯನ್ನು ಕಳುಹಿಸಲಾಯಿತು. ಬಾಲಾಜಿ ಒಳಗಿನ ಕಾರಿಡಾರ್ ಅನ್ನು ಸ್ಯಾನಿಟೈಸ್ ಮಾಡಿತ್ತು. ಬಾಲಾಜಿಯನ್ನು ಹಿಂಬಾಲಿಸಿದ ಆಕ್ಸೆಲ್ ಮೊದಲ ಕೊಠಡಿಯೊಳಗೆ ಹೋಗಿ ತೆರವುಗೊಳಿಸಿತು. ಆದರೆ, ಆತ ಎರಡನೇ ಕೊಠಡಿಗೆ ಪ್ರವೇಶಿಸಿದಾಗ ಉಗ್ರರು ಆತನ ಮೇಲೆ ಗುಂಡು ಹಾರಿಸಿದ್ದು, ಆಕ್ಸೆಲ್ ಹುತಾತ್ಮನಾಗಿದೆ.

ಇದಾದ ಬಳಿಕವೂ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು,ಭಯೋತ್ಪಾದಕ ಅಖ್ತರ್ ಹುಸೇನ್ ಭಟ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

5 ಗಂಟೆಗಳ ಕಾರ್ಯಾಚರಣೆ ಮುಗಿದ ನಂತರ ಆಕ್ಸೆಲ್ ಪಾರ್ಥಿವ ಶರೀರವನ್ನು ಕಟ್ಟಡದಿಂದ ಹೊರತೆಗೆಯಲಾಯಿತು ಮತ್ತು ಮರಣೋತ್ತರ ಪರೀಕ್ಷೆಗಾಗಿ 54 ಸಶಸ್ತ್ರ ಪಡೆಗಳ ಪಶುವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಯಿತು. ವರದಿಗಳ ಪ್ರಕಾರ, ಬುಲೆಟ್ ಪ್ರವೇಶ ಮತ್ತು ನಿರ್ಗಮನದ ಗಾಯಗಳನ್ನು ಹೊರತುಪಡಿಸಿ ಆಕ್ಸೆಲ್‌ ದೇಹದಲ್ಲಿ ಹತ್ತು ಹೆಚ್ಚುವರಿ ಗಾಯಗಳು ಮತ್ತು ಎಲುಬು ಮುರಿತವಾಗಿತ್ತು ಎಂದು ಸೇನಾ ಮೂಲಗಳು ವರದಿ ಮಾಡಿವೆ.
ಆಕ್ಸೆಲ್ ದಕ್ಷ K9 ಅಧಿಕಾರಿಯಾಗಿದ್ದು, ಈ ಹಿಂದೆ ಹಲವಾರು ಯಶಸ್ವಿ ಕಾರ್ಯಾಚರಣೆಗಳ ಭಾಗವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆಕ್ಸೆಲ್‌ ನಿಧನದಿಂದ ಇಡೀ ಘಟಕವು ದುಃಖಿತವಾಗಿದೆ .

ಇಂದು ಆಕ್ಸೆಲ್‌ನ ಅಂತಿಮ ಸಂಸ್ಕಾರವನ್ನು ಕಿಲೋ ಫೋರ್ಸ್ ಕಮಾಂಡರ್‌ನಲ್ಲಿ ನಡೆಸಲಾಯಿತು. ಸೇನೆಯ ಅಧಿಕಾರಿಗಳು, ಸಿಬ್ಬಂದಿ ಆಗಲಿದ ಶ್ವಾನಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ 26 ಎಡಿಯು ಆವರಣದಲ್ಲಿ ಸಮಾಧಿ ಮಾಡಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಗಣ್ಯರು ಸೇರಿದಂತೆ ಅನೇಕರು ಹುತಾತ್ಮನಾದ ಆಕ್ಸೆಲ್‌ಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!