ಪಕ್ಕದಮನೆಯವರಿಗೆ ಕೊಲೆ ಬೆದರಿಕೆ: ನಟಿ ಶರಣ್ಯಾ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳಿನ ಖ್ಯಾತ ನಟಿ ಶರಣ್ಯ ಪೊನ್ವನ್ನನ್‌ ವಿರುದ್ಧ ದೂರು ದಾಖಲಾಗಿದೆ. ಪಕ್ಕದಮನೆಯ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಚೆನ್ನೈ ವಿರುಂಭಾಗಕಂ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಯಿ ಪಾತ್ರದಿಂದ ಜನರ ಮನಸೆಳೆದಿರುವ ನಟಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪಕ್ಕದ ಮನೆಯ ಮಹಿಳೆ ಶ್ರೀದೇವಿ ಎನ್ನುವವರು ದೂರು ನೀಡಿದ್ದಾರೆ. ಪಾರ್ಕಿಂಗ್‌ ವಿಷಯವಾಗಿ ಜಗಳ ಆರಂಭವಾಗಿತ್ತು. ಅತಿರೇಖಕ್ಕೆ ಹೋಗಿ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಜೊತೆಗೆ ಸಾಕ್ಷಾಧಾರಗಳಿಗಾಗಿ ಸಿಸಿಟಿವಿ ಫೂಟೇಜ್‌ಗಳನ್ನೂ ನೀಡಿದ್ದಾರೆ.

ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!