ಬಾರಾಮುಲ್ಲಾದಲ್ಲಿ ಮೂವರು ಉಗ್ರರ ಸಹಚರರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭದ್ರತಾ ಪಡೆಗಳು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಮೂವರು ಉಗ್ರರ ಸಹಚರರನ್ನು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಂಟಿ ಚೆಕ್ ಪಾಯಿಂಟ್ ಸ್ಥಾಪಿಸಿದ್ದ ಭದ್ರತಾ ಪಡೆಗಳು, ಮೂವರು ಅನುಮಾನಾಸ್ಪದ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ್ದು, ನಂತರ ಎಚ್ಚೆತ್ತುಕೊಂಡಿದ್ದು,  ಅವರನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ಫೈಸಲ್ ಅಹ್ಮದ್ ಕಚ್ರೂ, ಅಕಿಬ್ ಮೆಹರಾಜ್ ಕಾನಾ ಮತ್ತು ಆದಿಲ್ ಅಕ್ಬರ್ ಗೋಜ್ರೆ ಎಂದು ಗುರುತಿಸಲಾಗಿದೆ. ಶೋಧದ ಸಮಯದಲ್ಲಿ ಪಿಸ್ತೂಲ್, ಮೊಬೈಲ್ ಫೋನ್ ಗಳು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!