Saturday, March 25, 2023

Latest Posts

ಬ್ರೆಜಿಲ್ ಭೂಕುಸಿತ ದುರಂತ : ಸತ್ತವರ ಸಂಖ್ಯೆ 65ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬ್ರೆಜಿಲ್‌ನ ಆಗ್ನೇಯ ಸಾವೊ ಪಾಲೊ ರಾಜ್ಯದ ಕರಾವಳಿಯಲ್ಲಿ ಕಳೆದ ವಾರ ಸಂಭವಿಸಿದ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತ ಪರಿಣಾಮ ಸತ್ತವರ ಸಂಖ್ಯೆ 65 ಕ್ಕೆ ಏರಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಾದವರಲ್ಲಿ 19 ಅಪ್ರಾಪ್ತ ವಯಸ್ಕರು ಸೇರಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಸೇನಾ ಪಡೆಗಳು, ಅಗ್ನಿಶಾಮಕ ದಳದವರು, ಸ್ವಯಂಸೇವಕರು ಮತ್ತು ರಕ್ಷಣಾ ಕಾರ್ಯಕರ್ತರು ಮೃತ ದೇಹಗಳನ್ನು ಹುಡುಕಲು ಮತ್ತು ಕಾಣೆಯಾದ ಜನರಿಗಾಗಿ ಹುಡುಕಾಟ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!