ಸಾಲದ ಸುಳಿಗೆ ಸಿಲುಕಿದ ಪಂಜಾಬ್‌: 47 ಸಾವಿರ ಕೋಟಿ ರೂ. ಸಾಲಕ್ಕೆ 27 ಸಾವಿರ ಕೋಟಿ ಬಡ್ಡಿ ಕಟ್ಟಿದ್ದೇವೆ ಎಂದ ಸಿಎಂ ಮಾನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಜಾಬ್‌ ರಾಜ್ಯ ಸಾಲದ ಸುಳಿಗೆ ಸಿಲುಕಿದೆ. ಆಪ್‌ ಸರ್ಕಾರ ಅಧಿಕಾರಕ್ಕೆ ಏರುವಾಗಲೇ ಪಂಜಾಬ್‌ ಸಾಲಗಾರ ರಾಜ್ಯ ಎನ್ನುವ ಕುಖ್ಯಾತಿ ಹೊಂದಿತ್ತು. ಇದರ ಬೆನ್ನಲ್ಲೇಹೊಸ ಸರ್ಕಾರ ಆದಾಯ ಕ್ರೋಢಿಕರಣದ ಯೋಜನೆಗಳ ಹೊರತಾಗಿ ಬಿಟ್ಟಿಭಾಗ್ಯಗಳಿಗೆ ಹಣ ಸುರಿದ ಕಾರಣಕ್ಕೆ ಪಂಜಾಬ್‌ ರಾಜ್ಯದ ಸಾಲ ಮತ್ತಷ್ಟು ಶಿಖರಕ್ಕೇರಿದೆ.

ಮಂಗಳವಾರ ಪಂಜಾಬ್‌ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ಗೆ ಪತ್ರ ಬರೆದಿರುವ ಸಿಎಂ ಭಗವಂತ್‌ ಸಿಂಗ್‌ ಮಾನ್‌, ರಾಜ್ಯ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರಧಾನಿ ಮೋದಿಗೆ ಮನವಿ ಮಾಡಿ ರಾಜ್ಯಕ್ಕೆ ಬರಬೇಕಾಗಿರುವ ಫಂಡ್‌ ರಿಲೀಸ್‌ ಮಾಡಿಸಿ ಎಂದು ಕೇಳಿಕೊಂಡಿದ್ದಾರೆ.

ಕಳೆದ ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ಸಾಲವೆಷ್ಟು ಎನ್ನುವ ಮಾಹಿತಿಯನ್ನೂ ರಾಜ್ಯಪಾಲರು ಕೇಳಿದ್ದರು. ಅದಕ್ಕೂ ಉತ್ತರ ನೀಡಿರುವ ಮಾನ್‌, ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ 47,107 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಇದರಲ್ಲಿ 48,530 ಕೋಟಿಯನ್ನು ಖರ್ಚು ಮಾಡಿದ್ದೇವೆ. ಬರೋಬ್ಬರಿ 27 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಬಡ್ಡಿ ರೂಪದಲ್ಲಿಯೇ ಕಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಉಚಿತ ವಿದ್ಯುತ್‌, 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂಪಾಯಿ, ನಿರುದ್ಯೋಗ ಭತ್ಯೆ ಹಾಗೂ ಉಚಿತ ನೀರನ್ನು ತನ್ನ ಪಂಜಾಬ್‌ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಅದಾಗಲೇ ಸಾಲದ ಶೂಲದಲ್ಲಿದ್ದ ಪಂಜಾಬ್‌ಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪಂಜಾಬ್‌ ಸರ್ಕಾರ 2022-23ರಲ್ಲಿ 32,447 ಕೋಟಿ ರೂಪಾಯಿ ಸಾಲ ಪಡೆದುಕೊಂಡಿತ್ತು. 2023ರ ಏಪ್ರಿಲ್‌ನಿಂದ ಆಗಸ್ಟ್‌ನವರೆಗೆ 14,660 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದೆ. ಹಿಂದಿನ ಸರ್ಕಾರ ಬಿಟ್ಟು ಹೋಗಿರುವ ಸಮಸ್ಯೆಗಳನ್ನು ತಮ್ಮ ಸರ್ಕಾರ ಆದ್ಯತೆಯ ಮೇರೆಗೆ ಪರಿಹರಿಸಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಒಂದು ವರ್ಷದ ಪಡೆದ ಸಾಲದ ಹೆಚ್ಚಿನ ಹಣ ಬಡ್ಡಿ ಮರುಪಾವತಿಗೆ ಹೋಗಿದೆ. 27,016 ಕೋಟಿ ರೂ.ಗಳ ಬೃಹತ್ ಮೊತ್ತ ಇದನ್ನು ಖರ್ಚಾಗಿದೆ ಎಂದು ಅವರು ಸಾಲದಿಂದ ಖರ್ಚು ಮಾಡಿದ ನಿಧಿಯ ಡೇಟಾವನ್ನು ಹಂಚಿಕೊಂಡಿದ್ದಾರೆ.

ನಾನು ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದಾಗ, ಹಿಂದಿನ ಸರ್ಕಾರಗಳು ಬಿಟ್ಟುಹೋಗಿರುವ ದೀರ್ಘಕಾಲದ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಿದ್ದೇವೆ. ನನ್ನ ಹಿಂದಿನ ಸರ್ಕಾರ ನಿರ್ಲಕ್ಷಿಸಿದ ಸಂಸ್ಥೆಗಳು ಅಥವಾ ಯೋಜನೆಗಳಿಗೆ ಧನಸಹಾಯ ಮಾಡಲು ನಾವು ಸಾಲ ಮತ್ತು ನಮ್ಮ ಸ್ವಂತ ಆದಾಯ ಸಂಪನ್ಮೂಲಗಳನ್ನು ಬಳಸಿದ್ದೇವೆ, ಹೊಸ ಸಾಲವನ್ನು ರಚಿಸಲು ಬಳಸಿದ್ದೇವೆ. ಬಂಡವಾಳದ ಆಸ್ತಿಗಳು ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುತ್ತವೆ ಎಂದು ಮನ್ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!