ದೀಪಕ್ ಹೂಡಾ- ಆಯೂಷ್ ಬದೌನಿ ಜೊತೆಯಾಟ: ಗುಜರಾತ್ ಗೆ 159 ರನ್​ಗಳ ಟಾರ್ಗೆಟ್

ಹೊಸದಿಗಂತ ವರದಿ, ಮಂಗಳೂರು:

ಐಪಿಎಲ್ ನಾಲ್ಕನೇ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ನಡೆಸಿದ ಲಖನೌ ಸೂಪರ್ ಜೈಂಟ್ಸ್​​ ಆರಂಭಿಕ ಆಟಗಾರರ ಬ್ಯಾಟಿಂಗ್​​​​ ವೈಫಲ್ಯದ ಹೊರತಾಗಿಯೂ ದೀಪಕ್ ಹೂಡಾ(55) ಹಾಗೂ ಆಯೂಷ್ ಬದೌನಿ(54)ರನ್​ಗಳ ನೆರವಿನಿಂದ ಎದುರಾಳಿ ಗೆಲುವಿಗೆ 159 ರನ್ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಗುಜರಾತ್ ತಂಡ ಎದುರಾಳಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಆರಂಭಿಕರಾಗಿ ಕಣಕ್ಕಿಳಿದ ಲಖನೌ ಕ್ಯಾಪ್ಟನ್​ ರಾಹುಲ್(0)​ ​ ಡಕ್‌​ ಆದರು. ಇದರ ಬೆನ್ನಲ್ಲೇ ಕ್ವಿಂಟನ್ ಡಿಕಾಕ್(7ರನ್​) ಕೂಡ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇದಾದ ಬಳಿಕ ಬಂದ ಲಿವಿಸ್​​​(10)ರನ್​, ಮನೀಷ್ ಪಾಂಡೆ(6)ರನ್​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದರು.
ಗುಜರಾತ್ ಬೌಲಿಂಗ್​ ದಾಳಿಗೆ ತತ್ತರಿಸಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಲಖನೌ ತಂಡಕ್ಕೆ ದೀಪಕ್ ಹೂಡಾ- ಆಯೂಷ್ ಬದೌನಿ ಜೋಡಿ ಉತ್ತಮ ಜೊತೆಯಾಟವಾಡಿತು.ಹೂಡಾ ತಾವು ಎದುರಿಸಿದ 41 ಎಸೆತಗಳಲ್ಲಿ 2 ಸಿಕ್ಸರ್​, 6 ಬೌಂಡರಿ ಸಮೇತ 55ರನ್​ಗಳಿಕೆ ಮಾಡಿದ್ರೆ, ಬದೌನಿ 41 ಎಸೆತಗಳಲ್ಲಿ 3 ಸಿಕ್ಸರ್​, 4ಬೌಂಡರಿ ಸಮೇತ 54ರನ್​ಗಳಿಸಿದರು ಕೃನಾಲ್ ಪಾಂಡ್ಯಾ ತಾವು ಎದುರಿಸಿದ 13 ಎಸೆತಗಳಲ್ಲಿ 3 ಬೌಂಡರಿ ಸಮೇತ 21ರನ್​ಗಳಿಕೆ ಮಾಡಿದರು.
ತಂಡ ಕೊನೆಯದಾಗಿ 20 ಓವರ್​ಗಳಲ್ಲಿ 6 ವಿಕೆಟ್​ನಷ್ಟಕ್ಕೆ 158ರನ್​ಗಳಿಕೆ ಮಾಡಿದ್ದು, ಎದುರಾಳಿ ತಂಡದ ಗೆಲುವಿಗೆ 159ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!