ಹೊಸದಿಗಂತ ಡಿಜಿಟಲ್ ಡೆಸ್ಕ್
ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನವು ಪುಶ್ಬ್ಯಾಕ್ ಸಮಯದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಈ ವೇಳೆ ಕೂಡಲೇ ಎಚ್ಚೆತ್ತು ಕೊಂಡ ಕಾರಣ ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ. ಈ ಘಟನೆ ವೇಳೆ ಪ್ರಯಾಣಿಕರು ವಿಮಾನದಲ್ಲಿದ್ದರು.
ಸ್ಪೈಸ್ ಜೆಟ್ ವಿಮಾನವು ಪ್ರಯಾಣಿಕರ ಟರ್ಮಿನಲ್ ನಿಂದ ರನ್ ವೇಗೆ ಚಲಿಸುವಾಗ ಪುಶ್ಬ್ಯಾಕ್ ಸಮಯದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರಿಗಾಗಿ ವಿಮಾನವನ್ನು ಬದಲಾಯಿಸಲಾಯಿತು.
ಘಟನೆಯ ಬಗ್ಗೆ ಮಾಹಿತಿ ನೀಡಿದ ಸ್ಪೈಸ್ ಜೆಟ್ ವಕ್ತಾರರು, ‘ಇಂದು, ಸ್ಪೈಸ್ ಜೆಟ್ ವಿಮಾನ ಎಸ್ ಜಿ 160 ದೆಹಲಿ ಮತ್ತು ಜಮ್ಮು ನಡುವೆ ಕಾರ್ಯನಿರ್ವಹಿಸಬೇಕಿತ್ತು. ಹಿಂದಕ್ಕೆ ತಳ್ಳುವ ಸಮಯದಲ್ಲಿ, ಬಲ-ರೆಕ್ಕೆಯ ಹಿಂಭಾಗದ ಅಂಚು ಕಂಬದೊಂದಿಗೆ ಡಿಕ್ಕಿ ಹೊಡೆದಿದೆ. ಇದು ಐಲೆರಾನ್ ಗೆ ಹಾನಿಯನ್ನುಂಟುಮಾಡಿತು. ವಿಮಾನವನ್ನು ಸರಿ ಪಡಿಸೋ ಕಾರಣದಿಂದಾಗಿ, ಪ್ರಯಾಣಿಕರಿಗಾಗಿ ಬದಲಿ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.