ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ದೀಪಕ್ ಪೂನಿಯಾಗೆ ಬೆಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 86 ಕೆಜಿ ವಿಭಾಗದಲ್ಲಿ ಭಾರತದ ದೀಪಕ್ ಪೂನಿಯಾ ಬೆಳ್ಳಿ ಪದಕಕ್ಕೆ ಸಮಾಧಾನಪಡಬೇಕಾಯಿತು.
ಚಾಂಪಿಯನ್‌ಷಿಪ್‌ನಲ್ಲಿ ಒಂದೂ ಪಾಯಿಂಟ್ಸ್ ಬಿಟ್ಟುಕೊಡದೇ ಫೈನಲ್ ಪ್ರವೇಶಿಸಿದ್ದ ದೀಪಕ್‌, ಚಿನ್ನದ ಪದಕದ ಸುತ್ತಿನಲ್ಲಿ ಕಜಕಸ್ತಾನದ ಅಜ್ಮತ್‌ ದೌಲತ್‌ಬೆಕೊವ್ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ಸಾಧ್ಯವಾಗಲಿಲ್ಲ.ಈ ಮೂಲಕ 1-6ರಿಂದ ಅಜ್ಮತ್‌ ಅವರಿಗೆ ಮಣಿದರು.
ಇದಕ್ಕೂ ಮೊದಲು ದೀಪಕ್‌ 6-0ಯಿಂದ ಇರಾನ್‌ನ ಮೊಹಸೆನ್‌ ಮೀರ್‌ಯೂಸುಫ್‌ ಮತ್ತು 5-0ಯಿಂದ ಕೊರಿಯಾದ ಗ್ವಾನುಕ್ ಕಿಮ್ ಅವರನ್ನು ಚಿತ್ ಮಾಡಿದ್ದರು.
ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ದೀಪಕ್ ಅವರಿಗೆ ಇದು ನಾಲ್ಕನೇ ಪದಕ. 2021ರಲ್ಲಿ ಬೆಳ್ಳಿ, 2019 ಮತ್ತು 2020ರಲ್ಲಿ ಕಂಚು ಗೆದ್ದುಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!