ಗುವಾಹಟಿ ಪಾಲಿಕೆ ಚುನಾವಣೆ: ಬಿಜೆಪಿ-ಎಜಿಪಿಗೆ ಗೆಲುವಿನ ಸಂಭ್ರಮ, ಕಾಂಗ್ರೆಸ್‌ ಶೂನ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಅಸ್ಸಾಂನ ಗುವಾಹಟಿ ಮಹಾನಗರ ಪಾಲಿಕೆ (ಜಿಎಂಸಿ) ಚುನಾವಣೆಯಲ್ಲಿ ಬಿಜೆಪಿ-ಎಜಿಪಿ ಮೈತ್ರಿಯು ಗೆಲುವು ಸಾಧಿಸಿದೆ. ಒಟ್ಟು 60 ವಾರ್ಡ್‌ಗಳ ಪೈಕಿ ಬಿಜೆಪಿಮೈತ್ರಿ ಪಕ್ಷವು 58 ವಾರ್ಡ್‌ಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಹುಮತ ದಾಖಲಿಸಿದೆ.
ಒಂದು ವಾರ್ಡ್‌ನಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಮತ್ತು ಮತ್ತೊಂದು ವಾರ್ಡ್‌ನಲ್ಲಿ ಅಸ್ಸಾಂ ಜಾತೀಯ ಪರಿಷತ್‌ (ಎಜೆಪಿ) ಗೆಲುವು ಸಾಧಿಸಿದ್ದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಪಕ್ಷವು ಶೂನ್ಯ ಸಾಧನೆಯೊಂದಿಗೆ ದೂಳೀಪಟವಾಗಿದೆ.
ಬಿಜೆಪಿ 52 ವಾರ್ಡ್‌ಗಳಲ್ಲಿ ಹಾಗೂ ಮೈತ್ರಿ ಪಕ್ಷ ಅಸ್ಸಾಂ ಗಣ ಪರಿಷತ್‌ (ಎಜಿಪಿ) ಆರು ವಾರ್ಡ್‌ಗಳಲ್ಲಿ ಜಯಭೇರಿ ದಾಖಲಿಸಿವೆ.
ಜಿಎಂಸಿ ಚುನಾವಣೆಗಳಲ್ಲಿ ಇದೇ ಮೊದಲ ಬಾರಿಗೆ ಮತದಾನಕ್ಕಾಗಿ ಇವಿಎಂ ಯಂತ್ರಗಳನ್ನು ಬಳಸಲಾಗಿತ್ತು. ಒಟ್ಟಾರೆ ಶೇಕಡ 52.80ರಷ್ಟು ಮತದಾನ ದಾಖಲಾಗಿತ್ತು. ಒಟ್ಟು 197 ಅಭ್ಯರ್ಥಿಗಳು ಕಣದಲ್ಲಿದ್ದರು.
ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿ ಟ್ವೀಟಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಸಹ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷವನ್ನು ಅಭಿನಂದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!