ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸುದ್ದಿ ಮಾಡುತ್ತಿರುವ ಬೆನ್ನಿಗೇ ಈಗ ಭಾರೀ ಆಕ್ರೋಶಗಳು ಮತ್ತೆ ಕೇಳಿಬರುತ್ತಿದೆ.
ಇಂತಹಾ ವಿಕೃತಿ ಮರುಕಳಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಹಲವು ಟೀಕೆಗಳಿಗೆ ಈಗ ವೇದಿಕೆಯಾಗುತ್ತಿದೆ. ಇಷ್ಟಕ್ಕೂ ಏನಿದು ಡೀಪ್‌ಫೇಕ್? ಇಲ್ಲಿದೆ ಓದಿ…
ಡೀಪ್ ಫೇಕ್ ತಂತ್ರಜ್ಞಾನ ಅತ್ಯಾಧುನಿಕವಾಗಿದ್ದು, ಇದರಲ್ಲಿ ಬೇರೆಯದ್ದೇ ವ್ಯಕ್ತಿಯ ದೇಹಕ್ಕೆ ಬೇರೆಯದ್ದೇ ತಲೆಯನ್ನು ಒಂದಿಷ್ಟೂ ಅನುಮಾನ ಬಾರದಂತೆ ಸೃಷ್ಟಿಸಲಾಗುತ್ತದೆ. ಅಸಲಿ ಫೋಟೋ ಸಿಗುವ ತನಕ ಈ ಫೋಟೋ ಅಸಲಿಯಾ, ನಕಲಿಯಾ ಎಂದು ತಿಳಿದುಕೊಳ್ಳುವುದೂ ಸಾಧ್ಯವಿಲ್ಲ. ಹೀಗಾಗಿ ಈ ತಂತ್ರಜ್ಞಾನ ಅತ್ಯಂತ ಗಂಭೀರ ಹಾನಿ ಉಂಟುಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕಾಗಿಯೇ ಈಗ ಎಲ್ಲೆಡೆ ವಿರೋಧಗಳು ಕೇಳಿಬರುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ