ಸಂಸತ್ ಸ್ಮೋಕ್ ಬಾಂಬ್ ಕೈ ಆರೋಪಕ್ಕೆ ಬಿಜೆಪಿ ’ಫೋಟೋ ರಿಲೀಸ್’ ಬಾಂಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಸದ್ದು ಮಾಡಿದ್ದ ಸಂಸತ್ ಸ್ಮೋಕ್ ಬಾಂಬ್ ಪ್ರಕರಣದಲ್ಲಿನ ಮಾಸ್ಟರ್‌ಮೈಂಡ್ ನ್ನಲಾಗುತ್ತಿರುವ ಲಲಿತ್ ಝಾ ಅವರೊಂದಿಗೆ ಟಿಎಂಸಿ ಶಾಸಕರ ಇರುವ ಫೋಟೋವನ್ನು ಬಿಜೆಪಿ ಬಿಡುಗಡೆ ಮಾಡಿ ಹೊಸ ಸಂಚಲನ ಮೂಡಿಸಿದೆ.
ಸ್ಮೋಕ್ ಬಾಂಬ್ ಎಸೆದ ಆರೋಪಿಗಳಿಗೆ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಆರೋಪ ಮಾಡುತ್ತಿರುವ ಬೆನ್ನಿಗೇ ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ತಪಸ್ ರಾಯ್ ಲಲಿತ್ ಝಾ ಆರೋಪಿಯೊಂದಿಗೆ ನಿಂತಿರುವ ಫೋಟೋ ಬಿಡುಗಡೆ ಮಾಡಿ ಬಿಜೆಪಿ ಸಖತ್ ತಿರುಗೇಟು ನೀಡಿದೆ.
ಬಂಗಾಳ ಬಿಜೆಪಿ ಮುಳಂಡ ಸುಕಾಂತೋ ಮಜುಂದಾರ್ ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಝಾ, ಟಿಎಂಸಿಯ ತಪಸ್ ರಾಯ್ ಅವರೊಂದಿಗೆ ಬಹಳ ಹಿಂದಿನಿಂದಲೂ ಒಡನಾಟ ಹೊಂದಿದ್ದಾರೆ. ಈ ಒಂದು ಸಾಕ್ಷಿ, ತನಿಖೆಗೆ ಸಾಕಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!