ಡೀಪ್‌ಫೇಕ್ ವಿಡಿಯೋ ಪ್ರಕರಣದ ಆರೋಪಿ ಅರೆಸ್ಟ್: ದೆಹಲಿ ಪೊಲೀಸರಿಗೆ ಧನ್ಯವಾದ ತಿಳಿಸಿದ ನಟಿ ರಶ್ಮಿಕಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಡೀಪ್‌ಫೇಕ್ ವಿಡಿಯೋ ಪ್ರಕರಣದಲ್ಲಿ ಕೊನೆಗೂ ವ್ಯಕ್ತಿಯೊಬ್ಬನ ಬಂಧನವಾಗಿದೆ. ರಶ್ಮಿಕಾ ಸೇರಿದಂತೆ ಹಲವರ ಡೀಪ್‌ಫೇಕ್ ವಿಡಿಯೋ (Deep Fake Video) ಮಾಡಿದ್ದ ಆಂಧ್ರ ಪ್ರದೇಶದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನದ ಬಳಿಕ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿ ಪೊಲೀಸರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಕೃತ್ಯದ ಜವಾಬ್ದಾರರನ್ನು ಬಂಧಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ. ಹುಡುಗಿಯೇ ಮತ್ತು ಹುಡುಗರೇ- ನಿಮ್ಮ ಒಪ್ಪಿಗೆಯಿಲ್ಲದೇ ನಿಮ್ಮ ಚಿತ್ರವನ್ನು ಎಲ್ಲಿಯಾದರೂ ಬಳಸಿದರೆ ಅಥವಾ ಮಾರ್ಫ್ ಮಾಡಿದ್ದರೆ. ಅದು ತಪ್ಪು, ನಿಮ್ಮನ್ನು ಬೆಂಬಲಿಸುವ ಜನರಿಂದ ನೀವು ಸುತ್ತುವರೆದಿರುವಿರಿ ಮತ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಇದು ನೆನಪಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಆಂಧ್ರ ಪ್ರದೇಶದ ಗುಂಟೂರು ಮೂಲದ ನವೀನ್ ಈಮಾನಿ (24) ಬಂಧಿತ ಆರೋಪಿಯಾಗಿದ್ದು, ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಫ್ಯಾನ್ ಪೇಜ್ ಅನ್ನು ನಿರ್ವಹಣೆ ಮಾಡುತ್ತಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!