ನನ್ನ ತಂದೆ ಕುರಿತ ಚಿತ್ರ ಮಾಡ್ತೇನೆ, ಇದಕ್ಕೆ ನಾನೇ ಪ್ರೊಡ್ಯೂಸರ್‌ ಅಂದ್ರು ದೀಪಿಕಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಸ್ಪೋರ್ಟ್ಸ್‌ ಸ್ಟಾರ್‌ ಗಳ ಚಿತ್ರಗಳು ತೆರೆ ಮೇಲೆ ಬರೋದು ಹೆಚ್ಚಾಗುತ್ತಿರುವ ನಡುವೆ ಈಗ ದೀಪಿಕಾ ಪಡುಕೋಣ್‌ ತಮ್ಮ ತಂದೆಯ ಕುರಿತು ಚಿತ್ರ ಮಾಡೋಕೆ ಮುಂದಾಗಿದ್ದಾರೆ.
ಸುಮಾರು ಮೂರು ದಶಕಗಳ ಹಿಂದೆ ಬ್ಯಾಡ್ಮಿಂಟನ್‌ ಲೋಕದಲ್ಲಿ ಅತಿ ಹೆಚ್ಚು ಹೆಸರು ಗಳಿಸಿದ ತಾರೆ ಪ್ರಕಾಶ್‌ ಪಡುಕೋಣ್. ಈಗ ದೀಪಿಕ ತಮ್ಮ ತಂದೆ ಪ್ರಕಾಶ್‌ ಪಡುಕೋಣ್‌ ಕುರಿತ ಸಿನಿಮಾ ಮಾಡುತ್ತಾರೆ ಅನ್ನೋ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿದೆ.
ಅಷ್ಟೇ ಅಲ್ಲ ಪ್ರಕಾಶ್‌ ಅವರ ವೃತ್ತಿ, ಸವಾಲುಗಳ ಕುರಿತು ಈ ಚಿತ್ರದಲ್ಲಿ ಹೇಳಲಿದ್ದಾರೆ. ಹಾಗೂ ಈ ಬಗ್ಗೆ ದೀಪಿಕಾ ನಿರಂತರ ಕೆಲಸ ಮಾಡುತ್ತಿದ್ದು, ಈ ಸಿನಿಮಾವನ್ನು ಅವರೇ ನಿರ್ಮಾಣ ಮಾಡಲಿದ್ದಾರಂತೆ.
ದೀಪಿಕಾ ಅವರ ಕಾ ಪ್ರೊಡಕ್ಷನ್ಸ್‌ ಅಡಿಯಲ್ಲಿ ಈಗಾಗಲೇ ಚಪಕ್ ಹಾಗೂ 83 ಸಿನಿಮಾಗಳು ತೆರೆ ಕಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!