ಚಂಬಲ್ ನದಿಗೆ ಬಿದ್ದ ಕಾರು: ಎಂಟು ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಟಾದಲ್ಲಿ ಛೋಟಿ ಪುಲಿಯಾದಿಂದ ಚಂಬಲ್ ನದಿಗೆ ಕಾರು ಬಿದ್ದಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಕಾರ್‌ನಲ್ಲಿದ್ದ ಎಂಟು ಮಂದಿ ಮದುವೆಗೆ ತೆರಳುತ್ತಿದ್ದರು. ವರ ಕೂಡ ಕಾರ್‌ನಲ್ಲಿಯೇ ಇದ್ದ. ಚಾಲಕನ ನಿಯಂತ್ರಣ ತಪ್ಪಿ ಕಾರ್ ನದಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರನ ಕಡೆಯವರು ಬೆಳಗ್ಗೆ ಮಾಧೋಪುರದಿಂದ ಉಜ್ಜಯನಿ ಕಡೆ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರ್ ನದಿಗೆ ಬಿದ್ದಿದೆ. ನೀರಿಗೆ ಬಿದ್ದ ತಕ್ಷಣ ಕಾರಿನ ಕಿಟಕಿ ತೆಗೆಯಲು ಯತ್ನಿಸಿದ್ದು, ಒಂದು ಕಿಟಕಿ ಮಾತ್ರ ತೆರೆಯಲು ಸಾಧ್ಯ ಆಗಿದೆ.

ಸ್ಥಳೀಯರು ನೀರಿನಲ್ಲಿ ಕಾರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಹಾರ ಕಾರ್ಯ ಆರಂಭವಾಗಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!