Sunday, December 4, 2022

Latest Posts

ದೀಪಿಕಾ-ರಣ್‌ವೀರ್ ದಾಂಪತ್ಯದಲ್ಲಿ ಬಿರುಕು, ಏನು ಹೇಳಿದ್ರು ರಣ್‌ವೀರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ರಣ್‌ವೀರ್-ದೀಪಿಕಾ ದಾಂಪತ್ಯದಲ್ಲಿ ಬಿರುಕು ಎದ್ದಿದೆ ಎನ್ನುವ ಸುದ್ದಿ ಎಲ್ಲೆಡೆ ಹರಡಿತ್ತು.
ಇದಕ್ಕೆ ರಣ್‌ವೀರ್ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಈ ಹಿಂದೆ ಉಮೈರ್ ಸಂಧು ಎನ್ನುವವರು ದೀಪಿಕಾ ಮತ್ತು ರಣ್‌ವೀರ್ ನಡುವೆ ಏನೂ ಸರಿಯಿಲ್ಲ ಎಂದಿದ್ದರು. ಇದಕ್ಕೆ ರಣ್‌ವೀರ್ ಉತ್ತರ ನೀಡಿದ್ದು, ನಾನು ದೀಪಿಕಾ ಡೇಟಿಂಗ್‌ನಲ್ಲಿ ಇದ್ದು ಇದೀಗ 10 ವರ್ಷ ಆಗಿದೆ. ದೇವರ ದಯೆಯಿಂದ ಎಲ್ಲವೂ ಚೆನ್ನಾಗಿಯೇ ಇದೆ. ಯಾವಾಗಲೂ ಇರಲಿದೆ ಎಂದು ರಣ್‌ವೀರ್ ಹೇಳಿಕೊಂಡಿದ್ದಾರೆ.

ಪ್ರತಿ ಕಾರ್ಯಕ್ರಮದಲ್ಲಿಯೂ ರಣ್‌ವೀರ್ ದೀಪಿಕಾರನ್ನು ಹೊಗಳುತ್ತಾರೆ. ಅವರಿಂದಲೇ ಈ ಜೀವನ ಇಷ್ಟು ಚೆನ್ನಾಗಿದೆ ಎಂದು ಹೇಳುತ್ತಾರೆ. ಇವರ ಪ್ರೀತಿ ನೋಡಿ ಬೇರೆ ನಟಿಯರೂ ನಮಗೂ ರಣ್‌ವೀರ್‌ನಂಥ ಗಂಡ ಬೇಕು ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!