ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ, ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣವೀರ್ ಸಿಂಗ್ ತಂದೆಯಾದ ಸಂತೋಷದಲ್ಲಿದ್ದಾರೆ.
ಸ್ಟಾರ್ ದಂಪತಿಗಳು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಗಳ ಆಗಮನದ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಒಂದು ಟೆಂಪ್ಲೇಟ್ ಅನ್ನು ಹಂಚಿಕೊಂಡಿದ್ದು, ಸ್ವಾಗತ ಮಗುವೇ 8.9.2024, ದೀಪಿಕಾ-ರಣವೀರ್ ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳು ದೀಪ್‌ವೀರ್ ಅವರ ಮಗಳನ್ನು ನೋಡಲು ಉತ್ಸುಕರಾಗಿದ್ದು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ನೆಟ್ಟಿಗರು ಈಗಾಗಲೇ ದೀಪಿಕಾ-ರಣವೀರ್‌ಗೆ ತಮ್ಮ ಮಗಳ ಹೆಸರನ್ನು ಹೀಗೆ ಇಡಿ ಎಂದು ಸೂಚಿಸಲು ಪ್ರಾರಂಭಿಸಿದ್ದಾರೆ.
ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಪೋಷಕರಾದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ತಮ್ಮ ಮಗಳಿಗೆ ಹೆಸರನ್ನು ಸೂಚಿಸಲು ಪ್ರಾರಂಭಿಸಿದ್ದಾರೆ. ಅಭಿಮಾನಿಯೊಬ್ಬರು ಕಮೆಂಟ್ ಮಾಡಿ, ಈಗಾಗಲೇ ತಮ್ಮ ಮಗಳಿಗೆ ‘ರಾವಿಕಾ’ ಎಂದು ಹೆಸರಿಟ್ಟಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಮತ್ತೊಬ್ಬರು ಮಗುವಿನ ಹೆಸರು ‘ದೀಶಾನಿ ಪಡುಕೋಣೆ ಸಿಂಗ್’ ಎಂದು ಇರಬೇಕು. ಇನ್ನು ಕೆಲವರು ಮಗಳಿಗೆ ‘ರುವಾಂಶಿ’ ಅಥವಾ ‘ಶಿವಾನಿ’ ಎಂದು ಹೆಸರಿಸಬೇಕೆಂದು ಸೂಚಿಸಿದ್ದಾರೆ.
ಇದರ ಜೊತೆಗೆ ಮಗಳಿಗೆ ರಶ್ಮಿಕಾ, ರಿಧ್ವಿ, ರಣ್ವಿಕಾ ಎಂದು ಹೆಸರಿಡಬೇಕು. ಅದೇ ರೀತಿ ದಿರಾ, ವಿದಾತ್ರಿ, ರಾನಿಕಾ, ಧೀನವಿರಾಕಾ ಎಂದು ಹೆಸರಿಸಬೇಕೆಂದು ಸೂಚಿಸಿದ್ದಾರೆ. ಅಭಿಮಾನಿಗಳು ನಿರಂತರವಾಗಿ ದಂಪತಿಗಳಿಗೆ ತಮ್ಮ ಮಗಳಿಗೆ ಹೆಸರುಗಳನ್ನು ಸೂಚಿಸುತ್ತಲೇ ಇದ್ದಾರೆ.
ಮಗಳ ಪೋಷಕರಾದ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್‌ಗೆ ಬಾಲಿವುಡ್ ಸೆಲೆಬ್ರಿಟಿಗಳು ನಿರಂತರವಾಗಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕರೀನಾ ಕಪೂರ್ , ಸೈಫ್ ಮತ್ತು ಮಕ್ಕಳ ಪರವಾಗಿ ಅಮ್ಮ ಮತ್ತು ಅಪ್ಪನಿಗೆ ಅಭಿನಂದನೆಗಳು. ದೇವರು ಪುಟ್ಟ ದೇವತೆಗೆ ಆಶೀರ್ವಾದ ಮಾಡಲಿ ಎಂದು ಬರೆದಿದ್ದಾರೆ. ಶ್ರದ್ಧಾ ಕಪೂರ್, ಅನನ್ಯಾ ಪಾಂಡೆ, ಪ್ರಿಯಾಂಕಾ ಚೋಪ್ರಾ ಮತ್ತು ಕೃತಿ ಸನನ್ ಮಗಳು ಹುಟ್ಟಿದ ಸಂತೋಷಕ್ಕೆ ಅಭಿನಂದನೆಗಳೂ ಎಂದಿದ್ದು, ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಾಜಪೂತ್ ಅಭಿನಂದನೆಗಳು ಅತ್ಯುತ್ತಮ ಕ್ಲಬ್‌ಗೆ ಸುಸ್ವಾಗತ ಎಂದು ಬರೆದಿದ್ದಾರೆ.
ಅರ್ಜುನ್ ಕಪೂರ್ ಬರೆದು- ಲಕ್ಷ್ಮಿ ಬಂದಿದ್ದಾಳೆ, ರಾಣಿ ಇಲ್ಲಿದ್ದಾಳೆ. ಅದೇ ರೀತಿ ಪರಿಣೀತಿ ಚೋಪ್ರಾ, ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಮಲೈಕಾ ಅರೋರಾ, ರೂಬಿನಾ ದಿಲೈಕ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.