ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಿಕಾ ಪಡುಕೋಣೆ ಅವರು ಶನಿವಾರ ಸಂಜೆ ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಅಡ್ಮಿಟ್ ಆಗಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪಡುಕೋಣೆ ದಂಪತಿ ತಮ್ಮ ಇತರೆ ಕುಟುಂಬ ಸದಸ್ಯರೊಟ್ಟಿಗೆ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಎಲ್ಲೂ ಕಾಣಿಸೋದಿಲ್ಲ. ಕಾರು ಮಾತ್ರ ಪಾಸ್ ಆಗುತ್ತದೆ.
ದೀಪಿಕಾ ಪಡುಕೋಣೆಗೆ ಸೆ.28ಕ್ಕೆ ಡೇಟ್ ಕೊಡಲಾಗಿತ್ತು. ಆದರೆ ದಿಢೀರ್ ಆಗಿ ದೀಪಿಕಾ ಅವರು ಆಸ್ಪತ್ರೆಗೆ ಆಗಮಿಸಿರುವುದನ್ನು ಗಮನಿಸಿದರೆ ಶೀಘ್ರವಾಗಿ ಮಗು ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.