ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬದ ನೆಪದಲ್ಲಿ ಬೆಲೆ ಏರಿಕೆ ಮಾಡುವ ವ್ಯಾಪಾರಿಗಳ ಮೇಲೆ ಕಾಸರಗೋಡು ಜಿಲ್ಲಾಡಳಿತ ಹದ್ದಿನಕಣ್ಣಿರಿಸಿದೆ.
ನಾಗರಿಕ ಸರಬರಾಜು ಇಲಾಖೆ, ಆಹಾರ ಸುರಕ್ಷತಾ ಅಧಿಕಾರಿಗಳು, ಪೋಲೀಸ್ ಇಲಾಖೆ, ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳ ತಂಡ ತಪಾಸಣಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಈಗಾಗಲೇ ಕಾಞಂಗಾಡ್ ಪರಿಸರದಲ್ಲಿನ ತರಕಾರಿ ಅಂಗಡಿ, ದಿನಸಿ ಅಂಗಡಿಗಳನ್ನು ತಪಾಸಣೆಗೊಳಪಡಿಸಲಾಗಿದೆ.
ಇನ್ನು ಹೊಟೇಲ್, ಹೈಪರ್ ಮಾರ್ಕೆಟ್ ಮೇಲೂ ತಂಡ ತಪಾಸಣೆ ನಡೆಸಿದ್ದು, ವೆಳ್ಳರಿಕುಂಡ್‌ನ 20 ಅಂಗಡಿಗಳಲ್ಲಿ 11 ಬೆಲೆ ಏರಿಕೆ ನಡೆಸಿರುವುದು ಪತ್ತೆಯಾಗಿದೆ.