ಕಾಡಿನಿಂದ ನಾಡಿನತ್ತ ಬಂದ ಜಿಂಕೆಯನ್ನು ಬೇಟೆಯಾಡಿದ ನಾಯಿಗಳು: ಗ್ರಾಮಸ್ಥರಿಂದ ರಕ್ಷಣೆ

ಹೊಸದಿಗಂತ:

ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಶನಿವಾರ ಆಹಾರ ಅರಿಸಿ ಕಾಡಿನಿಂದ ನಾಡಿನತ್ತ ಬಂದ ಜಿಂಕೆಯನ್ನು ನಾಯಿಗಳ ಹಿಂಡು ಬೆನ್ನಟಿ ಗಾಯಗೊಳಿಸುತ್ತಿದ್ದನ್ನು ಕಂಡ ಗ್ರಾವಸ್ಥರು ಜಿಂಕೆಯನ್ನು ನಾಯಿಗಳಿಂದ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಕಳೆದ 1-2 ತಿಂಗಳಿಂದ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದ್ದು ಜನರು ನೀರಿಗಾಗಿ ಅಲೆದಾಡುತ್ತಿರುವಾಗ ಅರಣ್ಯಗಳಲ್ಲಿ ಕೆರೆಕಟ್ಟೆಗಳು ಕಾಲಿಯಾಗಿ ಕಾಡು ಪ್ರಾಣಿಗಳಿಗೆ ನೀರಲಿದೆ ನಾಡಿನತ್ತ ಬರುತ್ತಿವೆ. ಸನವಳ್ಳಿ ಗ್ರಾಮದ ಅರಣ್ಯದಂಚಿನಿಂದ ಜಿಂಕೆಯೊಂದು ಕಾಡಿನಿಂದ ತಪ್ಪಿಸಿಕೊಂಡು ಆಹಾರ ಅರಸುತ್ತಾ ನಾಡಿನತ್ತ ಬಂದಾಗ ನಾಯಿಗಳ ಹಿಂಡು ಜಿಂಕೆಯನ್ನು ಬೆನ್ನಟ್ಟಿದೆ. ನಾಯಿಗಳಿಂದ ತಪ್ಪಸಿಕೊಳ್ಳಲು ಜಿಂಕೆಯೂ ಸನವಳ್ಳಿ ಗ್ರಾಮದತ್ತ ಬಂದಿದೆ.

ಆ ಸಂದರ್ಭದಲ್ಲಿ ಗ್ರಾಮದವರು ನೋಡಿ ನಾಯಿಗಲನ್ನು ಹೊಡೆದು ಓಡಿಸಿ ಜಂಕೆಯನ್ನು ರಕ್ಷಿಸಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿ. ಜಿಂಕೆಯನ್ನು ಆರೈಕೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ರಾಜು ಗುಬ್ಬಕ್ಕನವರ,ಜಗಧೀಶ ಕ್ಯಾಮಣಕೇರಿ, ಪರಶುರಾಮ ಮಟ್ಟಿಮನಿ, ಧರ್ಮಜ್ಜ ಅರಶಿಣಗೇರಿ,ಕಿರಣ ಗುಬ್ಬಕ್ಕನವರ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!