September 28, 2026
Monday, September 28, 2026
spot_img

ಜಿಂಕೆ ಮಾಂಸ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅಂದರ್

ಹೊಸದಿಗಂತ ವರದಿ ಮುಂಡಗೋಡ:

ಮುಂಡಗೋಡ ತಾಲೂಕಿನ ನಂದಿಗಟ್ಟಿ ಗ್ರಾಮದ ಮನೆಯೊಂದರಲ್ಲಿ ಜಿಂಕೆ ಮಾಂಸ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.

ಜುಲೈ 17 ರಂದು ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯವರು ದಾಳಿ‌ ಮಾಡಿ 9 ಕೆ.ಜಿ ಜಿಂಕೆ ಮಾಂಸ ಸಹಿತ ನಂದಿಕಟ್ಟಾ ಗ್ರಾಮದ ರಮೇಶ್ ಚವ್ಹಾಣ ಆರೋಪಿಯನ್ನು ಬಂಧಿಸಿದ್ದರು.ಈ ವೇಳೆ ಮತ್ತೊಬ್ಬ ಆರೋಪಿ ವಸಂತ ಕೊರವರ ತಲೆ ಮರೆಸಿಕೊಂಡಿದ್ದನು.

ಇದನ್ನೂ ಓದಿ:

ತಲೆ ಮರೆಸಿಕೊಂಡ ಆರೋಪಿ ಪತ್ತೆಗಾಗಿ ಅರಣ್ಯ ಇಲಾಖೆಯವರು ಬಲೆ ಬಿಸಿದ್ದರು. ಆರೋಪಿ ಶಿವಮೊಗ್ಗ ಜಿಲ್ಲೆಯ ಅನವಟ್ಟಿಯಲ್ಲಿರುವ ತನ್ನ ಮಾವನ ಊರಲ್ಲಿ ಸೋಮವಾರ ಬಂಧಿಸಿದ್ದಾರೆ.

ಡಿಸಿಎಪ್ ಅಜೀಜ್ ಶೇಖ್ ಎಸಿಎಫ್ ಹಾಗೂ ಈರೇಶ್ ಕಬ್ಬಿನ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ನೇತೃತ್ವದ ತಂಡ ಹಾಗೂ ಅನವಟ್ಟಿ ವಲಯ ಅರಣ್ಯಾಧಿಕಾರಿಗಳ ಸಿಬ್ಬಂದಿಗಳ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Must Read