September 28, 2026
Monday, September 28, 2026
spot_img

ಸರಣಿ ಸೋಲಿನ ಬೇಸರ, ಶತಕದ ಸಂಭ್ರಮ: ನಿವೃತ್ತಿ ಚರ್ಚೆಗೆ ‘ಹಿಟ್ ಮ್ಯಾನ್’ ಫುಲ್ ಸ್ಟಾಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ರೋಹಿತ್ ಶರ್ಮಾ, ತಮ್ಮ ನಿವೃತ್ತಿ ಕುರಿತ ಊಹಾಪೋಹಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ಟೀಕೆಗಳು ತಮ್ಮ ಆಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಟೀಕೆಗಳು ಹೊಸದೇನಲ್ಲ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ದಿನದಿಂದಲೂ ಟೀಕೆಗಳು ಕೇಳಿಬರುತ್ತಿವೆ. ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ತಂಡದ ಯಶಸ್ಸಿಗೆ ಕೊಡುಗೆ ನೀಡುವುದೇ ಮುಖ್ಯ ಎಂದು ರೋಹಿತ್ ಹೇಳಿದರು.

ಇದನ್ನೂ ಓದಿ:

ದೇಶಕ್ಕಾಗಿ ಆಡೋದೇ ಗುರಿ

ತಮ್ಮ ಪ್ರಮುಖ ಜವಾಬ್ದಾರಿ ರನ್ ಗಳಿಸಿ ಭಾರತವನ್ನು ಪ್ರತಿನಿಧಿಸುವುದಾಗಿದೆ. ವದಂತಿಗಳು ಮತ್ತು ಚರ್ಚೆಗಳು ಆಟದ ಭಾಗವೇ ಹೊರತು, ತಮ್ಮ ಗುರಿಯನ್ನು ಬದಲಾಯಿಸುವುದಿಲ್ಲ ಎಂದು ಅವರು ತಿಳಿಸಿದರು.

ಸರಣಿ ಸೋಲಿನ ಬೇಸರ

ವೈಯಕ್ತಿಕವಾಗಿ ಶತಕ ದಾಖಲಿಸಿದರೂ ಸರಣಿ ಸೋಲು ಬೇಸರ ತಂದಿದೆ ಎಂದು ರೋಹಿತ್ ಹೇಳಿದರು. ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ನಿರ್ಣಾಯಕ ಕ್ಷಣಗಳಲ್ಲಿ ತಂಡ ನಿರೀಕ್ಷಿತ ಆಟ ಆಡಲಿಲ್ಲ ಎಂದು ಅಭಿಪ್ರಾಯಪಟ್ಟರು.

Must Read