ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ವಿರುದ್ಧ ಮಾನನಷ್ಟ ಮೊಕದ್ದಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯಸಭಾ ಸಂಸದ ಮತ್ತು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (CJI) ರಂಜನ್ ಗೊಗೊಯ್ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಮತ್ತು ಅವರ ಆತ್ಮಕಥೆಗೆ ತಡೆಯಾಜ್ಞೆ ಕೋರಿ ಅಸ್ಸಾಂ ಲೋಕೋಪಯೋಗಿ (ಎಪಿಡಬ್ಲ್ಯು) ಅಧ್ಯಕ್ಷ ಅಭಿಜಿತ್ ಶರ್ಮಾ ಅವರು ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಗೊಗೊಯ್ ಮತ್ತು ರೂಪಾ ಪಬ್ಲಿಕೇಷನ್ಸ್ ವಿರುದ್ಧ ಶರ್ಮಾ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮ ಆತ್ಮಚರಿತ್ರೆ ‘ಜಸ್ಟೀಸ್ ಫಾರ್ ಎ ಜಡ್ಜ್’ ಪುಸ್ತಕದಲ್ಲಿ ನನ್ನ ವಿರುದ್ಧ ತಪ್ಪುದಾರಿಗೆಳೆಯುವ ಮತ್ತು ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸಿದ್ದಾರೆ ಎಂದು ಶರ್ಮಾ‌ ಆರೋಪ ಮಾಡಿದ್ದಾರೆ.

ಗೊಗೊಯ್ ಮತ್ತು ಅವರ ಪ್ರಕಾಶಕರು ನನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವಂತಹ ಯಾವುದೇ ಪುಸ್ತಕವನ್ನು ಮುಂದೆ ಪ್ರಕಟಿಸುವುದು, ವಿತರಿಸುವುದು ಅಥವಾ ಮಾರಾಟ ಮಾಡುವುದನ್ನು ತಡೆಯುವ ಜಾಹೀರಾತು-ಮಧ್ಯಂತರ ತಡೆಯಾಜ್ಞೆ ಕೋರಿ ಶರ್ಮಾ ಅರ್ಜಿ ಹಾಕಿದ್ದರು.

ಇಲ್ಲಿನ ಕಾಮ್ರೂಪ್ ಮೆಟ್ರೋ ಜಿಲ್ಲಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಮತ್ತು ತಡೆಯಾಜ್ಞೆಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ಕೋರ್ಟ್‌ ವಿಚಾರಣೆ ನಡೆಸಿತ್ತು. ಅರ್ಜಿದಾರರು ಮತ್ತು ಪ್ರತಿವಾದಿಗಳಿಬ್ಬರಿಗೂ ಸಮನ್ಸ್ ಜಾರಿಗೊಳಿಸಲು ಸೂಚಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 3ರಂದು ನಡೆಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!