ಕೊನೆಯ ಎಸೆತದಲ್ಲಿ ಸೋಲು; ವಿಶ್ವಕಪ್‌ ಸೆಮಿಫೈನಲ್‌ ರೇಸ್‌ ನಿಂದ ಹೊರಬಿದ್ದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಕೊನೆಯ ಎಸೆತದಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
ಟೂರ್ನಿಯ ಸೆಮೀಸ್‌ ಗೇರಲು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕಣಕ್ಕಿಳಿದ ಭಾರತ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ, ಶಫಾಲಿ ವರ್ಮಾ ಮತ್ತು ಮಿಥಾಲಿ ರಾಜ್ ಅವರ ಆಕರ್ಷಕ ಅರ್ಧಶತಗಳ ಬಲದಿಂದ ಭಾರತ ನಿಗದಿತ 50 ಓವರ್​ಗಳಲ್ಲಿ 274 ರನ್ ಕಲೆಹಾಕಿತು.
ಗುರಿ ಬೆನ್ನತ್ತಿದ ದ ಆಪ್ರಿಕಾ ವನಿತೆಯರಿಗೆ ಕೊನೆಯ ಆರು ಎಸೆತಗಳಲ್ಲಿ ಗೆಲುವಿಗೆ 7 ರನ್‌ ಗಳ ಅಗತ್ಯವಿತ್ತು. ಈ ಹಂತದಲ್ಲಿ ದ. 268 ರನ್‌ ಗಳಿಗೆ 6 ವಿಕೆಟ್‌ ಗಳನ್ನು ಕಳೆದುಕೊಂಡಿತ್ತು. ರೋಚಕಘಟ್ಟದತ್ತ ತಿರುಗಿದ ಈ ಓವರ್‌ ನ ಎರಡನೇ ಎಸೆತದಲ್ಲಿ ಡು ಫ್ರೀಜ್‌ ರನ್‌ ಔಟ್‌ ಆದರು. ಎರಡು ಎಸೆತಗಳಲ್ಲಿ ಮೂರು ರನ್‌ ಅಗತ್ಯವಿದ್ದಾಗ ಬೌಲರ್‌ ದೀಪ್ತಿ ಶರ್ಮಾ ನೋ ಬಾಲ್‌ ಎಸೆದಿದ್ದು ಭಾರತಕ್ಕೆ ಮುಳುವಾಗಿ ಪರಿಣಮಿಸಿತು. ಫ್ರೀ ಹಿಟ್‌ ನಿಂದಾಗಿ ಒತ್ತಡ ಮುಕ್ತವಾಗಿ ಆಡಿದ ಆಫ್ರೀಕಾ ವನಿತೆಯರು ಕೊನೆಯ ಎಸೆತದಲ್ಲಿ ಒಂದು ರನ್‌ ಬೇಕಿದ್ದಾಗ ಸಿಂಗಲ್‌ ಗಳಿಸುವ ಮೂಲಕ ರೋಚಕ ಗೆಲುವು ಒಲಿಸಿಕೊಂಡರು. ಒಂದು ವೇಳೆ ಪಂದ್ಯ ಡ್ರಾ ಆಗಿದ್ದರೂ ಭಾರತ ಸೆಮೀಸ್‌ ಗೆ ಏರುತ್ತಿತ್ತು. ಈ ಸೋಲಿನಿಂದಾಗಿ ಭಾರತ ಟೂರ್ನಿಯಿಂದ ಹೊರಬಿದ್ದಿದ್ದು, ಆಸ್ಟ್ರೇಲಿಯಾ, ದಕ್ಷಿಣ ಆಫ್ರೀಕಾ, ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡಿಸ್‌ ತಂಡಗಳು ಸೆಮಿಫೈನಲ್‌ ಹಂತ ಪ್ರವೇಶಿಸಿವೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!