ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂಡಿಯನ್ ಪ್ರೀಮಿಯರ್ ಟೀಗ್ ನಲ್ಲಿ ಇಂದು ( ಭಾನುವಾರ) ರಾತ್ರಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಫಾಫ್ ಡು ಪ್ಲೆಸಿ ನಾಯಕತ್ವದ ಆರ್ಸಿಬಿ ತಂಡವು ಮಾಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಜೊತೆಗೆ ಸೆಣಸಲಿದೆ. ಈ ಪಂದ್ಯ ರಾತ್ರಿ 7.30 ಕ್ಕೆ ನಡೆಯಲಿದೆ. ಈ ರೋಚಕ ಕಾದಾಟವನ್ನು ಕಣ್ತುಂಬಿಕೊಳ್ಳಲು ಆರ್ಸಿಬಿ ಅಭಿಮಾನಿಗಳು ಸಜ್ಜಾಗಿದ್ದಾರೆ. ಆರ್ಸಿಬಿ ನಾಯಕತ್ವ ತೊರೆದು ಈ ಬಾರಿ ಆಟಗಾರನಾಗಿ ಮಾತ್ರವೇ ಆಡುತ್ತಿರುವ ವಿರಾಟ್ ಕೊಹ್ಲಿ ಪಾಲಿಗೆ ಈ ಪಂದ್ಯವು ತಂಬಾ ವಿಶೇಷ ಪಂದ್ಯವಾಗಲಿದೆ.
ಐಪಿಎಲ್‌ನಲ್ಲಿ ಒಟ್ಟು 207 ಪಂದ್ಯಗಳಲ್ಲಿ ಆಡಿರುವ ವಿರಾಟ್ ಕೊಹ್ಲಿ 199 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಗೆ ಇಳಿದರೆ ಐಪಿಎಲ್ ನಲ್ಲಿ ಒಂದೇ ಫ್ರಾಂಚೈಸಿ ಪರ ಆಡಿ 200 ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆಯಲಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 199 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿ 6283 ರನ್ ಕಲೆಹಾಕಿದ್ದಾರೆ.