Tuesday, March 28, 2023

Latest Posts

ಪ್ರೇಮಿಗಳ ದಿನಕ್ಕೆ ಧಿಕ್ಕಾರ: ಮೈಸೂರಿನಲ್ಲಿ ಪುಲ್ವಾಮಾ ದಾಳಿ ಕರಾಳ ದಿನಾಚರಣೆ

ಹೊಸದಿಗಂತ ವರದಿ,ಮೈಸೂರು:

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಯುವ ಭಾರತ್ ಸಂಘಟನೆ ವತಿಯಿಂದ ಮಂಗಳವಾರ ದೇಶಪ್ರೇಮ ದಿನ ಹಾಗೂ ಪುಲ್ವಾಮಾ ದಾಳಿ ಕರಾಳ ದಿನವನ್ನು ಆಚರಿಸಲಾಯಿತು .

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರ ಹಿಡಿದು, ಅವರ ತ್ಯಾಗ ಬಲಿದಾನವನ್ನು ಸ್ಮರಿಸಲಾಯಿತು. ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ ,ವಿಶ್ವ ದೇಶಪ್ರೇಮಿಗಳಿಗೆ ಜಯವಾಗಲಿ ,ಭಾರತ್ ಮಾತಾಕಿ ಜೈ ವಂದೇ ಮಾತರಂ ,ವೀರ ಯೋಧರು ಅಮರರಾಗಲಿ ,ಸೈನಿಕರ ದಿನಾಚರಣೆ ಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಸಮಾಜ ಸೇವಕ. ಕೆ.ರಘುರಾಮ್ ವಾಜಪೇಯಿ, ಭಾರತ ದೇಶ ಪುರಾತನವಾದದ್ದು. ಪ್ರೇಮ ದಿನಾಚರಣೆ ನಮ್ಮ ಸಂಸ್ಕೃತಿಯಲ್ಲ. ಪ್ರೀತಿ ಪ್ರೇಮ ಎನ್ನುವುದು ತಂದೆ -ತಾಯಿ .ಗುರು- ಹಿರಿಯರು .ದೇಶದ ಬೆನ್ನಲುಬಾದ ಸೈನಿಕರು ಮತ್ತು ರೈತರ ಮೇಲೆ ಇರಬೇಕು .ಅರ್ಥವಿಲ್ಲದ ಪ್ರೇಮಿಗಳ ದಿನಾಚರಣೆ ಸಲ್ಲದು ಎಂದರು

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥೋರಾದ ಆವಂತಿಪೂರ ಬಳಿ ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪಡೆಯ ೪೦ ಮಂದಿ ಯೋಧರು ಉಗ್ರರ ಅಟ್ಟಹಾಸಕ್ಕೆ ಪ್ರಾಣ ತೆತ್ತಿದ್ದರು, ಬಹುಶಃ ಭಾರತ ದೇಶ ಎಂದೆoದಿಗೂ ಮರೆಯದ ಭೀಕರ ಘಟನೆಗಳಲ್ಲಿ ಇದು ಒಂದು.

ಈ ವೀರ ಯೋಧರ ತ್ಯಾಗ ಬಲಿದಾನಗಳನ್ನು ನಾವೆಲ್ಲ ಸ್ಮರಿಸಬೇಕಿದೆ. ನಮ್ಮ ದೇಶದ ಸುರಕ್ಷತೆಗಾಗಿ ಸೈನಿಕರು ತಮ್ಮ ಮನೆ, ಕುಟುಂಬದವರನ್ನು ತೊರೆದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ. ಅವರ ತ್ಯಾಗಗಳಿಂದಾಗಿ ನಾವೆಲ್ಲರೂ ನೆಮ್ಮದಿಯ ಸುಖ ಜೀವನ ನಡೆಸುವಂತಾಗಿದೆ. ಆದ್ದರಿಂದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆಬಲಿಯಾಗಿ ಹುತಾತ್ಮರಾದ ಸೈನಿಕರನ್ನು ನೆನೆಯಲು ಈ ದಿನವನ್ನು ದೇಶಪ್ರೇಮದ ದಿನವನ್ನಾಗಿಸೋಣ ಎಂದು ಹೇಳಿದರು.

ಈ ವೇಳೆ ನಗರಪಾಲಿಕ ಸದಸ್ಯೆ ಪ್ರಮೀಳಾ ಭರತ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು, ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾನಂದೀಶ್
ಅಜಯ್ ಶಾಸ್ತಿç, ನಗರಪಾಲಿಕ ನಾಮನಿರ್ದೇಶನ ಸದಸ್ಯರಾದ ಜಗದೀಶ್, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಚಾಮರಾಜ ಕ್ಷೇತ್ರದ ಹಿಂದುಳಿದ ವರ್ಗದ ಅಧ್ಯಕ್ಷ ಸೂರಜ್, ಮಹದೇವ ಪ್ರಸಾದ್, ಕಡಕೋಳ ಜಗದೀಶ್,ಸುಚಿಂದ್ರ, ವಿಘ್ನೇಶ್ವರ ಭಟ್, ಎಸ್.ಎನ್ ರಾಜೇಶ್, ದುರ್ಗಾ ಪ್ರಸಾದ್, ಶ್ರೀನಿವಾಸ್, ಚರಣ್, ಲಿಂಗರಾಜು ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!