Thursday, September 29, 2022

Latest Posts

ತೂಕ ಇಳಿಸೋದಾದ್ರೆ ಖಂಡಿತಾ ಈ ಹಣ್ಣು ತಿನ್ಬೇಡಿ!!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಿಮಗೇನಾದ್ರೂ ತೂಕ ಇಳಿಸೋ ಮನಸ್ಸಿದ್ಯಾ… ಹಾಗಾದ್ರೆ ಅಪ್ಪಿ ತಪ್ಪಿಯೂ ಈ ಹಣ್ಣುಗಳನ್ನು ತಿನ್ನಲೇಬೇಡಿ. ಕೆಲವೊಂದು ಹಣ್ಣುಗಳಲ್ಲಿ ಅತ್ಯಂತ ಹೆಚ್ಚಿನ ಕ್ಯಾಲೋರಿ ಹಾಗೂ ನೈಸರ್ಗಿಕವಾದ ಸಕ್ಕರೆ ಅಂಶವಿರುತ್ತವೆ. ಅವು ತೂಕ ಇಳಿಕೆಗೆ ಅಡ್ಡಿ ಮಾಡುತ್ತವೆ. ಹಾಗಾಗಿ ಅಂತಹ ಹಣ್ಣುಗಳಿಂದ ದೂರ ಇರುವುದು ಅತೀ ಅವಶ್ಯ.

ಹೆಚ್ಚಿನ ಕ್ಯಾಲೋರಿ ಹೊಂದಿದ ಹಣ್ಣುಗಳಲ್ಲಿ ಅವಕಾಡೋಕೂಡ ಒಂದು. ಇದರಲ್ಲಿ ಆರೋಗ್ಯಕರ ಕೊಬ್ಬಿನ ಅಂಶಗಳಿವೆಯಾದರೂ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು ಒಳ್ಳೆಯದು. ಬಾಯಿಗೆ ರುಚಿಯಾಗಿರುವ ಬಾಳೆ ಹಣ್ಣು ಸೇವನೆಯಿಂದ ಹೆಚ್ಚಿನ ಕ್ಯಾಲೋರಿ ಪ್ರಾಪ್ತವಾಗುತ್ತದೆ. ಹಿತ ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ. ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹಾಗೂ ಸಾಕಷ್ಟು ಕ್ಯಾಲೋರಿ ಅಂಶ ಹೊಂದಿರುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟ್ ಹೊಂದಿರುವ ತೆಂಗಿನ ಕಾಯಿ ಅತಿಯಾಗಿ ಸೇವಿಸುವುದರಿಂದ ತೂಕ ಜಾಸ್ತಿಯಾಗುತ್ತದೆ. ಹಣ್ಣಿನ ರಾಜ ಮಾವುಕೂಡಾ ಅತಿಯಾದ ಕ್ಯಾಲೋರಿ ಹೊಂದಿದ ಹಣ್ಣು. ಇದು ತೂಕ ಇಳಿಕೆಗೆ ತಡೆನೀಡುತ್ತದೆ. ಡ್ರೈ ಫ್ರೂಟ್ ಬಾಯಿಗೆ ರುಚಿಕರವಾಗಿದ್ದರೂ ತೂಕ ಇಳಿಕೆಗೆ ತಡೆಯೊಡ್ಡುತ್ತದೆ. ಹಾಗಾಗಿ ಈ ಹಣ್ಣುಗಳನ್ನು ಆದಷ್ಟು ದೂರವಿಡುವುದು ಉತ್ತಮ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!