ಕೊಡಗಿನ ದೊಡ್ಡತ್ತೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ: ಅಪಾರ ಬೆಳೆ ನಷ್ಟ

ಹೊಸದಿಗಂತ ವರದಿ, ಕುಶಾಲನಗರ:
ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮ ಮಲ್ಲಿಕಾರ್ಜುನ ಎಂಬವರಿಗೆ ಸೇರಿದ ಜಮೀನಿಗೆ ಒಂಟಿ ಸಲಗವೊಂದು ದಾಳಿ ನಡೆಸಿದ್ದು, ಅವರ ಮನೆ ಮುಂಭಾಗದ ಗೇಟ್’ನ್ನು ಮುರಿದಿದೆ.
ಅತ್ತೂರು ಮೀಸಲು ಅರಣ್ಯ ಪ್ರದೇಶದದಿಂದ ಬಂದ ಒಂಟಿ ಸಲಗ ಹಾರಂಗಿ ನದಿಯ ಅಂಚಿನ ಮೂಲಕ ಬೆಂಡೆಬೆಟ್ಟ ಕಾಡಿಗೆ ಬಂದು ಅಲ್ಲಿಂದ ಸಮೀಪದ ದೊಡ್ಡತ್ತೂರು ಗ್ರಾಮಕ್ಕೆ ನುಸುಳಿದೆ.
ಮಲ್ಲಿಕಾರ್ಜುನ ಅವರ ಮನೆಯ ಮುಂಭಾಗದ ಗೇಟ್’ನ್ನು ತುಳಿದು ಪುಡಿಮಾಡಿದ್ದಲ್ಲದೆ, ಅಲ್ಲಿಂದ ಪಕ್ಕದ ಜಮೀನಿನಲ್ಲಿ ಫಲವತ್ತಾಗಿ ಬೆಳೆಸಲಾಗಿದ್ದ ಮರಗೆಣಸು ಮತ್ತು ಬಾಳೆ ಬೆಳೆಗಳನ್ನು ತುಳಿದು ತಿಂದು ಭಾರೀ ನಷ್ಟ ಪಡಿಸಿದೆ.
ಅತ್ತೂರು ವಲಯದ ಅರಣ್ಯ ಅಧಿಕಾರಿ ಅನಿಲ್ ಡಿಸೋಜ, ಸಿಬ್ಬಂದಿ ಸಚಿನ್ ಸ್ಧಳ ಪರಿಶೀಲನೆ ನಡೆಸಿ ಪರಿಹಾರವನ್ನು ಒದಗಿಸುವ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!