ಉಕ್ರೇನ್‌ ನಿಂದ ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ, ವ್ಯಾಕ್ಸಿನೇಷನ್‌ ಮೈತ್ರಿ: ಪ್ರಧಾನಿ ಮೋದಿಯನ್ನು ಕೊಂಡಾಡಿದ ಶೇಖ್‌ ಹಸೀನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ರಷ್ಯಾ ಯುದ್ಧ ಪ್ರಾರಂಭವಾದ ದಿನಗಳಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನು ವಾಪಸ್‌ ಕರೆತರುವಲ್ಲಿ ಮೋದಿ ಸರ್ಕಾರದ ಪಾತ್ರವನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಕೊಂಡಾಡಿದ್ದಾರೆ. ಸುದ್ದಿ ಸಂಸ್ಥೆ ಏಎನ್‌ಐ ಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಅವರು ಮೋದಿ ಸರ್ಕಾರದ ಸಹಾಯವನ್ನು ಶ್ಲಾಘಿಸಿದ್ದಾರೆ.

ಸೋಮವಾರದಂದು ಭಾರತಕ್ಕೆ ಭೇಟಿ ನೀಡುತ್ತಿರುವ ಶೇಖ್‌ ಹಸೀನಾ ಸಂದರ್ಶನದಲ್ಲಿ ಮಾತನಾಡುತ್ತ ಅವರು ಎರಡು ನೆರೆಹೊರೆಯವರ ನಡುವೆ ನಿಕಟ ಸಹಕಾರಕ್ಕೆ ಒತ್ತು ನೀಡಬೇಕು. ಭಿನ್ನಾಭಿಪ್ರಾಯಗಳೇನೇ ಇದ್ದರೂ ಅವುಗಳನ್ನು ಸಂವಾದದ ಮೂಲಕ ಪರಿಹರಿಸಿಕೊಳ್ಳಬೇಕು. ಭಾರತ ಮತ್ತು ಬಾಂಗ್ಲಾದೇಶವು ಹಲವಾರು ಕ್ಷೇತ್ರಗಳಲ್ಲಿ ಇದನ್ನು ಸಾಧಿಸಿದೆ ಎಂದಿದ್ದಾರೆ.

ವಿಶೇಷವಾಗಿ ಎರಡು ಕ್ಷೇತ್ರಗಳಲ್ಲಿ ಭಾರತವನ್ನು ಕೊಂಡಾಡಿದ ಅವರು “ರಷ್ಯಾ ಮತ್ತು ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಬಾಂಗ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ ಸ್ನೇಹಪರತೆಗಾಗಿ ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ” ಎಂದು ಶೇಖ್‌ ಹಸೀನಾ ತಮ್ಮ ವಿಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನು ಭಾರತ ಸರ್ಕಾರದ ಮೈತ್ರಿ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತ ಸರ್ಕಾರದ ವ್ಯಾಕ್ಸಿನೇಷನ್‌ ಮೈತ್ರಿಯನ್ನು ಸಹ ಹೊಗಳಿದ್ದಾರೆ. “ವ್ಯಾಕ್ಸಿನೇಷನ್‌ ಮೈತ್ರಿಯು ಪ್ರಧಾನಿ ಮೋದಿಯವರು ಕೈಗೊಂಡ ಅತ್ಯಂತ ವಿವೇಕಯುತ ಉಪಕ್ರಮವಾಗಿದೆ. ಈ ಉಪಕ್ರಮಕ್ಕಾಗಿ ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ.ಅವರು ಲಸಿಕೆಗಳನ್ನು ಕೊಡುಗೆ ನೀಡಿದ್ದಾರೆ. ಇದರಿಂದ ಬಾಂಗ್ಲಾದೇಶವು ತನ್ನ ಜನಸಂಖ್ಯೆಯ ಶೇಕಡಾ 90 ರಷ್ಟು ಜನರಿಗೆ ಕೋವಿಡ್ -19 ಲಸಿಕೆಗಳನ್ನು ನೀಡಿದೆ. ಬಾಂಗ್ಲಾದೇಶಕ್ಕೆ ಮಾತ್ರವಲ್ಲ, ದಕ್ಷಿಣ ಏಷ್ಯಾದ ಕೆಲವು ದೇಶಗಳಿಗೂ ಇದು ನಿಜವಾಗಿಯೂ ತುಂಬಾ ಸಹಾಯಕವಾಗಿದೆ” ಎಂದಿದ್ದಾರೆ.

ಭಾರತವನ್ನು ಬಾಂಗ್ಲಾದೇಶದ ಪ್ರಮಾಣೀಕರಿಸಿದ ಮಿತ್ರ ಎಂದು ಶೇಖ್‌ ಹಸೀನಾ ಉಲ್ಲೇಖಿಸಿದ್ದು 1971ರ ಮೊದಲು ಹಾಗೂ ನಂತರ ಬಾಂಗ್ಲಾದೇಶದ ಅಗತ್ಯದ ಸಮಯದಲ್ಲಿ ಆ ದೇಶವು ಬಾಂಗ್ಲಾದೇಶದ ಪರವಾಗಿ ನಿಂತಿದೆ. ನಮ್ಮ 1971 ರ ಯುದ್ಧದ ಸಮಯದಲ್ಲಿ ಅವರ ಕೊಡುಗೆಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!