ಗಡ-ಗಡ ಚಳಿಯಲ್ಲೂ ಗಂಗೆಯಲ್ಲಿ ಮುಳುಗುವ ಭಕ್ತಭಾವ

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಾದ್ಯಂತ ಈಗ ಭಾರೀ ಚಳಿ. ಉತ್ತರ ಪ್ರದೇಶದಲ್ಲಿ ತಾಪಮಾನ 4 ಡಿಗ್ರಿ ಸೆಲ್ಶಿಯಸ್. ಮೈಮೇಲೆ ಹಲವು ಪದರಗಳ ಬಟ್ಟೆ ಬೇಕಾಗುತ್ತದೆ ಚಳಿಯಿಂದ ರಕ್ಷಿಸಿಕೊಳ್ಳಲು.
ಆದರೆ ವಾರಾಣಸಿಯಲ್ಲಿ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡುವವರ ಭಕ್ತಿಭಾವ ಮಾತ್ರ ಈ ಚಳಿಯನ್ನು ಮೀರಿಸುತ್ತದೆ. ಮಹಾಚಳಿಯಲ್ಲೂ ಗಂಗೆಯ ತಣ್ಣೀರಿನಲ್ಲಿ ಮುಳುಗೇಳುತ್ತಿದ್ದಾರೆ.

ಪ್ರತೀಕ್ ತಿವಾರಿ ಎಂಬ ಭಕ್ತ ಎ ಎನ್ ಐ ಸುದ್ದಿಸಂಸ್ಥೆ ಜತೆ ಮಾತನಾಡುತ್ತ ಹೇಳಿದ್ದು- ಚಳಿ ಬರುತ್ತೆ, ಹೋಗುತ್ತೆ. ಆದರೆ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನ ಮಾಡುವ ಭಾಗ್ಯವನ್ನು ಮೀರಿದ್ದು ಮತ್ತೊಂದಿಲ್ಲ. ಹೊಸವರ್ಷವನ್ನು ಇದಕ್ಕಿಂತ ಉತ್ತಮವಾಗಿ ಆರಂಭಿಸೋದಾದರೂ ಹೇಗೆ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!