ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ಮಕ್ಕಳಿಗೆ ಮೊಬೈಲ್ ಇಲ್ಲದಿದ್ರೆ ಏನೂ ಇಲ್ಲ, ಊಟ ಮಾಡುವಾಗ್ಲೂ ಮೊಬೈಲ್, ಬೋರಾದ್ರೆ ಮೊಬೈಲ್, ಮೂಡ್ ಇಲ್ಲ ಅಂದ್ರೆ ಮೊಬೈಲ್, ಅತ್ತಾಗ ಸಮಾಧಾನ ಮಾಡಲು ಮೊಬೈಲ್ ಇಷ್ಟೇ ಯಾಕೆ ಅಪ್ಪ ಅಮ್ಮ ನೆಮ್ಮದಿಯಾಗಿ ಊಟ ಮಾಡ್ಬೇಕಂದ್ರೂ ಮಕ್ಕಳಿಗೆ ಮೊಬೈಲ್ ಕೊಡಬೇಕು.
ಇದೇ ಅಭ್ಯಾಸ ಹೆಚ್ಚಾಗಿ ಕಡೆಗೆ ಮಕ್ಕಳಿಂದ ಮೊಬೈಲ್ ಹುಚ್ಚು ಬಿಡಿಸೋಕಾಗಷ್ಟು ದೊಡ್ಡ ಸಮಸ್ಯೆಯೇ ಆಗುತ್ತದೆ. ಜನರ ಜತೆ ಬೆರೆಯೋಕೆ ಇಷ್ಟಪಡದೇ ಇರುವುದು, ಸಮಾರಂಭಗಳಲ್ಲಿ ಬಾರದೇ ಇರುವುದು, ಸದಾ ತನ್ನ ರೂಮ್‌ನಲ್ಲೇ ಇರೋದು.. ಹೀಗೆ ಮಕ್ಕಳು ಮೊಬೈಲ್‌ನ್ನೇ ಜೀವನ ಮಾಡ್ಕೋತಾರೆ. ಇದಕ್ಕಾಗಿಯೇ ರಾಜ್ಯ ಸರ್ಕಾರ ಅಧ್ಯಯನ ನಡೆಸಲು ಸಿದ್ಧವಾಗಿದೆ.
ಮೊಬೈಲ್ ಗೀಳು ಹಾಗೂ ಕ್ರಮಗಳ ಕುರಿತ ಅಧ್ಯಯನಕ್ಕೆ ತಜ್ಞರ ಸಮಿತಿಯನ್ನು ಮಕ್ಕಳ ಹಕ್ಕುಗಳ ಆಯೋಗ ರಚನೆ ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮೊಬೈಲ್ ಅಭ್ಯಾಸದ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ವರದಿ ನೀಡಲಿದೆ.
ಮಕ್ಕಳ ಮೊಬೈಲ್ ಅಭ್ಯಾಸ ತಪ್ಪಿಸುವ ಮೊದಲು ನೀವು ಮೊಬೈಲ್ ನೋಡೋದನ್ನು ನಿಲ್ಲಿಸಿ, ನೀವು ಕಣ್ಣುಮುಚ್ಚಿ ಕಣ್ಣು ತೆರೆಯುವ ಮುನ್ನ ಮಕ್ಕಳು ದೊಡ್ಡವರಾಗಿಬಿಡುತ್ತಾರೆ, ಮೊಬೈಲ್ ನೋಡುತ್ತಾ ನಿಮ್ಮನ್ನೂ ಇಗ್ನೋರ್ ಮಾಡಿಬಿಡುತ್ತಾರೆ. ಮೊಬೈಲ್ ಇಲ್ಲದೆ, ಅವರ ಜತೆ ಆಟ ಆಡಿ ಅವರಿಗಾಗಿ ಸಮಯ ಕಳೆಯಿರಿ.