Tuesday, December 9, 2025

ದೆಹಲಿ ಕಾರು ಸ್ಫೋಟ | ‘ವೈಟ್ ಕಾಲರ್’ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು: ಹರಿಯಾಣದ ಮಹಿಳಾ ವೈದ್ಯೆ ಅರೆಸ್ಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ʻವೈಟ್-ಕಾಲರ್ʼ ಉಗ್ರರ ಘಟಕದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ವೇಳೆ ದಕ್ಷಿಣ ಕಾಶ್ಮೀರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯೆ ಸಂಪರ್ಕದ ಮಾಹಿತಿ ಸಿಕ್ಕಿದೆ.

ಹರಿಯಾಣದ ರೋಹ್ಟಕ್‌ ಮೂಲದ ಡಾ.ಪ್ರಿಯಾಂಕಾ ಶರ್ಮಾ ಜಮ್ಮು ಮತ್ತು ಕಾಶ್ಮೀರದಿಂದ ದೆಹಲಿಗೆ ಸಂಪರ್ಕ ಹೊಂದಿರುವ ʻವೈಟ್-ಕಾಲರ್ʼ ಭಯೋತ್ಪಾದನಾ ಘಟಕದ ಜೊತೆ ಸಂಪರ್ಕದಲ್ಲಿದ್ದಾಳೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆಗಾಗಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರ ಗುಪ್ತಚರ ತಂಡ ಅನಂತ್‌ನಾಗ್‌ನ ಮಲಕ್‌ನಾಗ್ ಪ್ರದೇಶದಲ್ಲಿ ಬಾಡಿಗೆ ವಸತಿಗೃಹದ ಮೇಲೆ ದಾಳಿ ನಡೆಸಿ ಆಕೆಯನ್ನು ಬಂಧಿಸಿದ್ದಾರೆ. ಆಕೆಯ ಮನೆಯಲ್ಲಿ ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್‌ಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಭಯೋತ್ಪಾದಕ ಘಟಕಕ್ಕೆ ಆರ್ಥಿಕ ನೆರವಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾಗ ಪ್ರಿಯಾಂಕ ಶರ್ಮಾ ಹೆಸರು ಕೇಳಿಬಂದಿತ್ತು. ಬಳಿಕ ಪೊಲೀಸರು ಆಕೆಯ ವಿಳಾಸ ಪತ್ತೆ ಹಚ್ಚಿದ್ದರು. ಹೆಚ್ಚಿನ ಪರಿಶೀಲನೆಗಾಗಿ ಹರಿಯಾಣದ ತಂಡವೊಂದು ಅನಂತ್‌ನಾಗ್‌ಗೆ ತೆರಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!