September 25, 2026
Friday, September 25, 2026
spot_img

ರಿಯಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಉಡೀಸ್: ಜೀವ ಉಳಿಬೇಕಾದ್ರೆ ನಿಮ್ಮ ದೇಶಕ್ಕೆ ಹೊರಡಿ ಎಂದ ದೊಡ್ಡಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ನಡುವೆಯೇ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋನ್ ದಾಳಿ ನಡೆದಿದೆ. ಇರಾನ್ ನಡೆಸಿದ ದಾಳಿ ಎಂದು ಅಮೆರಿಕ ಅಧಿಕಾರಿಗಳು ಆರೋಪಿಸಿದ್ದು, ಎರಡು ಡ್ರೋನ್‌ಗಳು ಕಟ್ಟಡದ ಮೇಲ್ಛಾವಣಿ ಭಾಗಕ್ಕೆ ಅಪ್ಪಳಿಸಿ ಸ್ಫೋಟ ಹಾಗೂ ಬೆಂಕಿಗೆ ಕಾರಣವಾದವು ಎಂದು ತಿಳಿಸಲಾಗಿದೆ.

ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಘರ್ಷಣೆ ಮುಂದುವರಿದಿರುವ ವೇಳೆ ಈ ದಾಳಿ ನಡೆದಿರುವುದು ಆತಂಕ ಹೆಚ್ಚಿಸಿದೆ. ಇತ್ತೀಚಿನ ಹೋರಾಟದಲ್ಲಿ ತನ್ನ ಆರು ಸೈನಿಕರು ಸಾವನ್ನಪ್ಪಿರುವುದನ್ನು ಅಮೆರಿಕ ಒಪ್ಪಿಕೊಂಡಿದೆ. ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:

ಭದ್ರತಾ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಬಹ್ರೇನ್, ಕುವೈತ್, ಈಜಿಪ್ಟ್, ಲೆಬನಾನ್, ಓಮನ್, ಇರಾನ್, ಇರಾಕ್, ಕತಾರ್, ಇಸ್ರೇಲ್, ವೆಸ್ಟ್ ಬ್ಯಾಂಕ್, ಗಾಜಾ, ಸೌದಿ ಅರೇಬಿಯಾ, ಜೋರ್ಡಾನ್, ಸಿರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಯೆಮೆನ್ ಸೇರಿದಂತೆ 14 ದೇಶಗಳನ್ನು ತಕ್ಷಣ ತೊರೆಯುವಂತೆ ಅಮೆರಿಕ ನಾಗರಿಕರಿಗೆ ಸೂಚಿಸಲಾಗಿದೆ.

ಅಗತ್ಯವಿದ್ದರೆ ರಾಜ್ಯ ಇಲಾಖೆ ನೀಡಿರುವ ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

Must Read