VIRAL | ಅಭಿಮಾನಿ ಫೋನ್ ಕಿತ್ತೆಸೆದ ಆದಿತ್ಯ ನಾರಾಯಣ್, ಹೊಸ ಫೋನ್ ಕೊಡ್ಸಿ ಅಂತಿದಾರೆ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಯಕ ಆದಿತ್ಯ ನಾರಾಯಣ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಕಾನ್ಸರ್ಟ್ ಒಂದರಲ್ಲಿ ಅಭಿಮಾನಿಯ ಫೋನ್ ಕಿತ್ತುಕೊಂಡು ದೂರಕ್ಕೆ ಎಸೆದಿದ್ದಾರೆ.

ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಾಡುತ್ತಾ ಸ್ಟೇಜ್ ಮೇಲೆ ಓಡಾಡ್ತಿದ್ದ ಆದಿತ್ಯ ಇದ್ದಕ್ಕಿಂತೆಯೇ ಅಭಿಮಾನಿಯ ಮೊಬೈಲ್ ಕಿತ್ತುಕೊಳ್ತಾರೆ. ಅಲ್ಲಿ ಸಾಕಷ್ಟು ವ್ಯಕ್ತಿಗಳು ಆದಿತ್ಯ ಹಾಡನ್ನು ರೆಕಾರ್ಡ್ ಮಾಡಿಕೊಳ್ತಿದ್ರೂ, ಈ ವ್ಯಕ್ತಿಯ ಮೊಬೈಲ್‌ನ್ನು ಕಿತ್ತು ದೂರಕ್ಕೆ ಎಸೆದಿದ್ದಾರೆ.

ಯಾವುದೇ ಸೆಲೆಬ್ರಿಟಿ ಇರಲಿ ಅಭಿಮಾನಿಗಳನ್ನು ಹೀಗೆ ನಡೆಸಿಕೊಳ್ಳೋದು ತಪ್ಪು, ವಿಡಿಯೋ ಮಾಡ್ಬೇಡ ಎಂದು ಹೇಳ್ಬೋದಿತ್ತು. ಆದರೆ ಫೋನ್ ಕಿತ್ಕೊಂಡು ಎಸೆದಿದ್ದಾರೆ. ಇದು ತಪ್ಪು, ಅವನಿಗೆ ಹೊಸ ಫೋನ್ ಕೊಡಿಸಿ ಎಂದು ಪಟ್ಟು ಹಿಡಿದಿದ್ದಾರೆ. ಫೋನ್ ರಭಸದಿಂದ ಎಸೆದ ಕಾರಣ ಇನ್ಯಾರಿಗಾದರೂ ಪೆಟ್ಟಾಗಿದ್ಯಾ ಎಂದು ಜನ ಆಲೋಚಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!