ಸಮನ್ಸ್ ಗೆ ಡೋಂಟ್ ಕೇರ್ ಎಂದ ದೆಹಲಿ ಸಿಎಂ ಕೇಜ್ರಿವಾಲ್‌ ಶಾಕ್: ಹೈಕೋರ್ಟ್ ಮೊರೆ ಹೋದ ಇಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಇಡಿ 5 ಬಾರಿ ಸಮನ್ಸ್ ನೀಡಿದ್ದು,. ಆದರೆ ಕೇಜ್ರಿವಾಲ್ ಐದೂ ಬಾರಿಯೂ ವಿಚಾರಣೆಗೆ ಹಾಜರಾಗದೆ ಅಸಂವಿಧಾನಿಕ, ಕಾನೂನು ಬಾಹಿರ ಆರೋಪ ಮಾಡಿದ್ದಾರೆ. ಇದೀಗ ಬೇರೆ ದಾರಿ ಕಾಣದ ಇಡಿ ಅಧಿಕಾರಿಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ದೆಹಲಿ ಅಬಕಾರಿ ನೀತಿ ಅಕ್ರಮದ ಕುರಿತು ಇಡಿ ಅಧಿಕಾರಿಗಳು ಹಲವು ಮಾಹಿತಿ ಕಲೆ ಹಾಕಿದ್ದಾರೆ. ಮನೀಶ್ ಸಿಸೋಡಿಯಾ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಈ ವಿಚಾರಣೆ ಮುಂದುವರಿದ ಭಾಗವಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಆದರೆ ಇಡಿ ಸಮನ್ಸ್ ಕಾನೂನು ಬಾಹಿರ ಎಂದು ಆರೋಪಿಸಿ ಕೇಜ್ರಿವಾಲ್ ವಿಚಾರಣೆಯಿಂದ ಗೈರಾಗಿದ್ದರು.

ಸಿಎಂ ಕೇಜ್ರಿವಾಲ್‌ ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಬಂಧಿಸಲು ಇ.ಡಿ ಹೊಂಚು ಹಾಕಿದೆ ಹಾಗೂ ಇದಕ್ಕೆ ಬಿಜೆಪಿಯ ಕುಮ್ಮಕ್ಕಿದೆ. ಕೇಜ್ರಿವಾಲ್‌, ವಿಚಾರಣೆಗೆ ಹಾಜರಾಗುವುದಿಲ್ಲ’ ಎಂದು ಆಪ್‌ ನಾಯಕರು ಪದೇ ಪದೇ ಕಿಡಿ ಕಾರಿದ್ದರು. ಈ ಬೆಳವಣಿಗೆ ಬಳಿಕ ಇದೀಗ ಇಡಿ ಹೈಕೋರ್ಟ್ ಮೆಟ್ಟಿಲೇರಿದೆ. ಫೆಬ್ರವರಿ 7 ರಂದು ಈ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!